ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹ…ಅಂಕೊಲಾಜಿ ಬಗ್ಗೆ ಮಹಿಳೆಯರಿಗೆ ಕಾರ್ಯಾಗಾರ…

ಮೈಸೂರು,ಫೆ1,Tv10 ಕನ್ನಡ

ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಇಂದು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳೆಯರಿಗೆ ಅಂಕೋಲಾಜಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ಮರುಳೆೇಶ್ವರ ನೇಗಿಲಯೋಗಿ ಸೇವಾಭವನದಲ್ಲಿ ನಡೆದ ಕಾರ್ಯಕ್ರಮವನ್ನ ….ಉದ್ಘಾಟಿಸಿದರು.
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯ ಕಾರ್ಯಾಗಾರದಲ್ಲಿ ತಿಳುವಳಿಕೆ ಮೂಡಿಸಲಾಯಿತು.ಕಾರ್ಯಾಗಾರದಲ್ಲಿ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯು ಮಹಿಳೆಯರಿಗೆ ನಿರ್ದಿಷ್ಟವಾದ ಕ್ಯಾನ್ಸರ್ ಗಳಾದ ಗರ್ಭಕಂಠದ ಕ್ಯಾನ್ಸರ್, ಸ್ಥನದ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ವಾಲ್ವಾರ್ ಕ್ಯಾನ್ಸರ್ ಗಳ ಅಪಾಯದ ಅಂಶಗಳು,ಸಾಮಾನ್ಯ ಲಕ್ಷಣಗಳು, ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಅವಂತ್ ಬಿ ಕೆ ಜಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಕ್ಯಾನ್ಸರ್ ರೋಗ ತಜ್ಞೆ (ಆನ್ಕೊಲೊಜಿಸ್ಟ್ )ಆಗಿ ಕಾರ್ಯನಿರ್ವಹಸುತ್ತಿರುವ ಡಾ.ಡಿ ಆರ್ ರಮ್ಯಾ . ರವರು HPV ಲಸಿಕೆ, ಸ್ಕ್ರೀನಿಂಗ್, PAP ಸ್ಮೀಯರ್ / HPV ಡಿಎನ್ಎ ಪರೀಕ್ಷೆ, MRI ಮತ್ತು ಮ್ಯಾಮೊಗ್ರಾಮ್ ಸ್ಕ್ರೀನಿಂಗ್ ಹೀಗೇ ಮುಂತಾದ ಪರೀಕ್ಷೆಗಳನ್ನು ಯಾವ ಸಂದರ್ಭಗಳಲ್ಲಿ ಮಾಡಲಾಗುವುದು ಎಂದು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸದಸ್ಯರೊಂದಿಗೆ ಸಂವಾದವನ್ನು ಏರ್ಪಾಡಿಸಲಾಗಿತ್ತು. ಮಹಿಳೆಯರು ತಮ್ಮೆಲ್ಲ ಸಂದೇಹಗಳಿಗೆ ಉತ್ತರವನ್ನು ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಜೆ ಶೋಭ ರವರು ವಹಿಸಿದ್ದರು.ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹಲವಾರು ಮಹಿಳೆಯರು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *