ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಮೈಸೂರು ಕಾಪ್ಸ್…ಹಿಂಪಡೆದ ಪ್ರತಿಭಟನೆ…ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸೆ…
- TV10 Kannada Exclusive
- February 1, 2024
- No Comment
- 197
ಮೈಸೂರು,ಫೆ1,Tv10 ಕನ್ನಡ
ಸಾರ್ವಜನಿಕರ ಸಮಸ್ಯೆಗೆ ಪೊಲೀಸರು ಸ್ಪಂದಿಸುವುದಿಲ್ಲ ಎಂಬ ಆರೋಪವನ್ನ ಹುಸಿ ಮಾಡುವ ಪ್ರಸಂಗವೊಂದು ಬೆಳಕಿಗೆ ಬಂದಿದೆ.ಪೊಲೀಸರ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ ಸಂಸ್ಥೆಯೊಂದು ಕರೆ ನೀಡಿದ ಪ್ರತಿಭಟನೆಯನ್ನ ಹಿಂದಕ್ಕೆ ಪಡೆದು ಪೊಲೀಸ್ ಅಧಿಕಾರಿಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಪೊಲೀಸ್ ಕಾಪ್ ಗಳಿಗೆ ಧನ್ಯವಾದ ತಿಳಿಸಿ ಅವರ ಕಾರ್ಯವೈಖರಿಯನ್ನ ಶ್ಲಾಘಿಸಿದ್ದಾರೆ.
ಕುವೆಂಪುನಗರ ಠಾಣೆ ನಿರೀಕ್ಷಕರಾದ ಅರುಣ್ ಹಾಗೂ ಕುವೆಂಪುನಗರ ಸಂಚಾರಿ ಠಾಣೆ ಉಪನಿರೀಕ್ಷಕರಾದ ಮದನ್ ಕುಮಾರ್ ಮೆಚ್ಚುಗೆಗೆ ಪಾತ್ರರಾದ ಕಾಪ್ಸ್.ಮೈಸೂರಿನ ವಿವೇಕಾನಂದ ನಗರ ವೃತ್ತದಿಂದ ರಾಯಲ್ ಎನ್ ಫೀಲ್ಡ್ ವರೆಗೆ ಯಾವುದೇ ರೋಡ್ ಹಂಪ್ ಗಳು ಇಲ್ಲದ ಕಾರಣ ಸಾಕಷ್ಟು ಅಪಘಾತಗಳು ನಡೆದಿವೆ.ಸದರಿ ರಸ್ತೆಯಲ್ಲಿ ಹಂಪ್ ಗಳನ್ನ ನಿರ್ಮಿಸುವಂತೆ ವಾಯ್ಸ್ ಆಫ್ ಪ್ಯೂಪಲ್ ಎಂಬ ಸಂಸ್ಥೆ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದಿತ್ತು.ಕಳೆದ ನಾಲ್ಕು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಗದ ಹಿನ್ನಲೆ ಫೆ.4 ರಂದು ಸಂಸ್ಥೆ ಪ್ರತಿಭಟನೆ ಹಾದಿ ಹಿಡಿಯಿತು.ಇದನ್ನ ಮನಗಂಡ ಕುವೆಂಪುನಗರ ಠಾಣೆ ನಿರೀಕ್ಷಕರಾದ ಅರುಣ್.ಎಲ್. ಹಾಗೂ ಕುವೆಂಪುನಗರ ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮದನ್ ಕುಮಾರ್ ರವರು ಸದರಿ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನ ಅಳವಡಿಸಿ ಅಪಘಾತಗಳನ್ನ ತಡೆಹಿಡಿಯುವಲ್ಲಿ ಮುಂಜಾಗ್ರತೆ ವಹಿಸಿದ್ದಾರೆ.ಇಬ್ಬರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿರುವ ಸಂಸ್ಥೆ ಪ್ರತಿಭಟನೆಯನ್ನ ಹಿಂದಕ್ಕೆ ಪಡೆದಿದೆ.ಅಲ್ಲದೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳನ್ನ ತಿಳಿಸಿದೆ.ನಿರೀಕ್ಷಕರಾದ ಅರುಣ್.ಎಲ್ ಹಾಗೂ ಉಪ ನಿರೀಕ್ಷಕರಾದ ಮದನ್ ಕುಮಾರ್ ರವರ ಸಮಯೋಚಿತ ನಿರ್ಧಾರವನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್, ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಜಾಹ್ನವಿ ರವರು ಪ್ರಶಂಸಿಸಿದ್ದಾರೆ…