ನಿರ್ಲಕ್ಷ್ಯಕ್ಕೆ ಒಳಗಾದ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳು…ಕಾಯಕಲ್ಪ ಒದಗಿಸುವರೇ ಅಧಿಕಾರಿಗಳು…?
- TV10 Kannada Exclusive
- February 1, 2024
- No Comment
- 50
ಮೈಸೂರು,ಫೆ1,Tv10 ಕನ್ನಡ
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣಗೊಂಡ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳು ಸಂಪೂರ್ಣ ನಿರ್ಲಕ್ಯಕ್ಕೆ ಒಳಗಾಗಿದೆ.ಸ್ವಂತ ಕಟ್ಟಡಗಳನ್ನ ನಿರ್ಲಕ್ಷಿಸಿ ಬಾಡಿಗೆ ಕಟ್ಟಡಗಳನ್ನ ಆಶ್ರಯಿಸಿರುವ ಅಧಿಕಾರಿಗಳ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ
ಆಕಾಶವಾಣಿ ಕಚೇರಿ ಬಳಿಯ ಚೆಲುವಾಂಬ ಪಾರ್ಕ್ ಮುಂಭಾಗ ಇರುವ ಮೈಸೂರು ಮಹಾನಗರ ಪಾಲಿಕೆ ಕಟ್ಟಡಗಳ ಸ್ಥಿತಿ ಶೋಚನೀಯವಾಗಿದೆ.ಇಲ್ಲಿ ಮೂರು ಕಟ್ಟಡಗಳಿದೆ.ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ.ತೋಟಗಾರಿಕೆ,ಆಶ್ರಯ ಇಲಾಖೆಗೆ ಸೇರಿದ ಎರಡು ಕಚೇರಿಗಳು ಹಾಗೂ ಖಾಲಿ ಬಿದ್ದಿರುವ ಒಂದು ಕಟ್ಟಡ ಅಧಿಕಾರಿಗಳ ನಿರ್ಲಕ್ಷತೆಗೆ ಮೂಕ ಸಾಕ್ಷಿಯಾಗಿ ನಿಂತಿವೆ.ಶಿಥಿಲಗೊಂಡ ಗೋಡೆಗಳು,ತೆರುವಾಗದ ತೆಂಗಿನ ಗರಿಗಳು,ಕಸದ ರಾಶಿಯಾದ ಆವರಣ,ಬಿರುಕು ಬಿಟ್ಟ ಕಾಂಪೌಂಡ್,ಸೋರಿಕೆಯಾಗುತ್ತಿರುವ ಕುಡಿಯುವ ನೀರು,ಫಾಸ್ಟ್ ಫುಡ್ ವಾಹನಗಳಿಗೆ ಆಶ್ರಯವಾದ ಆವರಣ,ಸೋರಿಕೆಯಾಗುತ್ತಿರುವ ಯುಜಿಡಿ ಪೈಪ್ ಗಳು ಅಧಿಕಾರಿಗಳ ಬೇಜವಾಬ್ದಾರಿತನವನ್ನ ಎತ್ತಿ ಹಿಡಿಯುತ್ತಿದೆ.ಕಚೇರಿಗಳನ್ನ ಸಮರ್ಪಕವಾಗಿ ಬಳಸಿಕೊಳ್ಳದ ಹಿನ್ನಲೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಲಕ್ಷಾಂತರ ತೆರಿಗೆ ಹಣ ವೆಚ್ಚ ಮಾಡಿ ನಿರ್ಮಿಸಲಾದ ಕಟ್ಟಡಗಳಿ ಶಿಥಿಲವಾಗುವ ಹಂತ ತಲುಪಿದ್ದರೂ ಕಾಯಕಲ್ಪ ಒದಗಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಸ್ವಂತ ಕಟ್ಟಡಗಳನ್ನ ನಿರ್ಲಕ್ಷಿಸಿ ಬಾಡಿಗೆ ಕಟ್ಟಡ ಆಶ್ರಯಿಸುವ ಪಾಲಿಕೆ ಅಧಿಕಾರಿಗಳ ಕೆಟ್ಟ ನಿರ್ಧಾರಕ್ಕೆ ಕಡಿವಾಣ ಹಾಕಬೇಕಿದೆ.ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಕಟ್ಟಡಗಳನ್ನ ಯೋಗ್ಯ ರೀತಿಯಲ್ಲಿ ಬಳಕೆ ಮಾಡುವಂತಾಗಬೇಕಿದೆ.ಸಂಪೂರ್ಣ ನಶಿಸಿಹೋಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕಟ್ಟಡಗಳನ್ನ ಸುಸ್ತಿತಿಗೆ ತಂದು ಬಳಕೆ ಮಾಡುವರೇ…?