
ಹುಣಸೂರು: ಬೋನಿಗೆ ಬಿದ್ದ ಚಿರತೆ…ಅರಣ್ಯ ವಲಯಕ್ಕೆ ರವಾನೆ…
- TV10 Kannada Exclusive
- February 2, 2024
- No Comment
- 145
ಹುಣಸೂರು,ಫೆ2,Tv10 ಕನ್ನಡ
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ಸುಮಾರು ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಹುಣಸೂರು ಅಗ್ನಿಶಾಮಕ ಠಾಣೆ ಬಳಿ
ಗಿರೀಶ್ ಎಂಬುವವರ ಮನೆ ಬಳಿ ಕಾಣಿಸಿಕೊಂಡಿತ್ತು.ಅರಣ್ಯ ಇಲಾಖೆ ಸಿಬ್ಬಂದಿಗಳು ನಾಯಿ ಕಟ್ಟಿದ ಬೋನು ಇರಿಸಿದ್ದರು.
ನಾಯಿ ಬೇಟೆಗೆ ಬಂದ ಚಿರತೆ ಬೋನಿಗೆ ಬಿದ್ದಿದೆ.
ಸೆರೆ ಸಿಕ್ಕ ಚಿರತೆಗೆ ಚಿಪ್ ಅಳವಡಿಸಿ ನಾಗರಹೊಳೆ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ…