
ಆನೆ ತುಳಿತಕ್ಕೆ ವ್ಯಕ್ತಿ ಬಲಿ ಪ್ರಕರಣ…15 ಲಕ್ಷ ಪರಿಹಾರ ಚೆಕ್ ವಿತರಣೆ…
- TV10 Kannada Exclusive
- February 3, 2024
- No Comment
- 239


ಹುಣಸೂರು,ಫೆ3,Tv10 ಕನ್ನಡ
ಆನೆ ತುಳಿತಕ್ಕೆ ಮೃತಪಟ್ಟ ಚೆಲುವಯ್ಯ ರವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ 15 ಲಕ್ಷ ಪರಿಹಾರದ ಚೆಕ್ ವಿತರಿಸಿದರು.ಇಂದು ಬೆಳಿಗ್ಗೆ ವೀರನಹೊಸಳ್ಳಿಯ ಜಮೀನಿನಲ್ಲಿ ಚೆಲುವಯ್ಯ ಕೆಲಸ ಮಾಡುತ್ತಿದ್ದ ವೇಳೆ ಧಿಢೀರ್ ಪ್ರತ್ಯಕ್ಷವಾದ ಸಲಗ ದಾಳಿ ನಡೆಸಿ ಬಲಿ ಪಡೆದಿತ್ತು.ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿ ಲಿಂಗರಾಜು ರವರು ಚೆಲುವಯ್ಯ ರವರ ಮನೆಗೆ ಭೇಟಿ ನೀಡಿ ಮೃತರ ಪತ್ನಿ ಚೆಲುವಮ್ಮ ರವರಿಗೆ 15 ಲಕ್ಷದ ಪರಿಹಾರ ಚೆಕ್ ನೀಡಿದರು…