ರೇಡಿಯೆಂಟ್ ಆಸ್ಪತ್ರೆ ಉಸ್ತುವಾರಿ ಡಾ.ರಾಜೀವ್ ವಿರುದ್ದ ವಂಚನೆ ಆರೋಪ…ಟ್ರಸ್ಟಿಗಳಿಂದ FIR ದಾಖಲು
- TV10 Kannada Exclusive
- February 4, 2024
- No Comment
- 431
…
ಮೈಸೂರು,ಫೆ4,Tv10 ಕನ್ನಡ
ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ರೇಡಿಯೆಂಟ್ ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಾ.ರಾಜೀವ್ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಟ್ರಸ್ಟಿಗಳ ಗಮನಕ್ಕೆ ಬಾರದಂತೆ ಮತ್ತೊಂದು ಸಂಸ್ಥೆ ಜೊತೆ ರೇಡಿಯೆಂಟ್ ಆಸ್ಪತ್ರೆಯನ್ನ ವಿಲೀನ ಮಾಡಿ ಹಣ ಪಡೆದುಕೊಂಡಿದ್ದಾರೆಂದು ಆರೋಪಿಸಿ ವಂಚನೆ ಪ್ರಕರಣ ದಾಖಲಿಸಲಾಗಿದೆ.ಟ್ರಸ್ಟಿಗಳಾದ ಬಿ.ಜಗದೀಶ್,ಹರಿಪ್ರಕಾಶ್ ಶರ್ಮ ಹಾಗೂ ಸರಿತಾ ಶರ್ಮ ರವರು ಡಾ.ರಾಜೀವ್ ವಿರುದ್ದ FIR ದಾಖಲಿಸಿದ್ದಾರೆ.
1997 ರಲ್ಲಿ ಬಿ.ಜಗದೀಶ್ ರವರು ಡಾ.ಬಸಪ್ಪ ಮತ್ತು ಅರುಣ್ ಕುಮಾರ್ ಎಂಬುವರ ಜೊತೆ ಸೇರಿ ಪಟೇಲ್ ರುದ್ರಪ್ಪ ಎಂಬುವರ ಹೆಸರಿನಲ್ಲಿ ಟ್ರಸ್ಟ್ ರಚಿಸಿದ್ದಾರೆ.ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಟ್ರಸ್ಟ್ ಗೆ ವಿಜಯನಗರ ಮೂರನೇ ಹಂತದಲ್ಲಿ ಸಿಎ ನಿವೇಶನ ಮಂಜೂರಾಗಿದೆ.2012 ರಲ್ಲಿ ಜಗದೀಶ್ ರವರು ಟ್ರಸ್ಟ್ ನ ಕಾರ್ಯದರ್ಶಿಯಾಗಿ ಇವರ ಪತ್ನಿ ಕೌಸಲ್ಯಾದೇವಿ ಸದಸ್ಯರಾಗಿ,ಹರಿಪ್ರಕಾಶ್ ಶರ್ಮ ಅಧ್ಯಕ್ಷರಾಗಿ ಇವರ ಪತ್ನಿ ಸರಿತಾ ಶರ್ಮ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ.ಇದೇ ವೇಳೆ ಬೆಂಗಳೂರಿನ ಡಾ.ರಾಜೀವ್ ಹಾಗೂ ಇವರ ಪತ್ನಿ ಬಾನು ರವರೂ ಸಹ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ.ಸದರಿ ಆರು ಮಂದಿ ಲೈಫ್ ಟೈಮ್ ಟ್ರಸ್ಟಿಗಳಾಗಿ ಮುಂದುವರೆದಿದ್ದಾರೆ.ಟ್ರಸ್ಟ್ ಗೆ ಮಂಜೂರಾದ ನಿವೇಶನದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿದ್ದಾರೆ. ಜಗದೀಶ್ ರವರು ಬ್ಯಾಂಕ್ ಸಾಲ ಹಾಗೂ ವೈಯುಕ್ತಿಕ ಹಣ ಒಟ್ಟು 8.55 ಕೋಟಿ ವೆಚ್ಚದಲ್ಲಿ ಹಣ ಹೂಡಿದ್ದು 2015 ರಲ್ಲಿ ರೇಡಿಯೆಂಟ್ ಆಸ್ಪತ್ರೆ ಅಸ್ತಿತ್ವಕ್ಕೆ ಬಂದಿದೆ.ಆಸ್ಪತ್ರೆ ಉಸ್ತುವಾರಿಯನ್ನ ಡಾ.ರಾಜೀವ್ ರವರಿಗೆ ನೀಡಿದ್ದಾರೆ.ಕಾರಣಾಂತರಗಳಿಂದ ಜಗದೀಶ್ ಮತ್ತೊಂದು ವಿಚಾರದಲ್ಲಿ ಬುಸಿಯಾದ ಸಮಯದಲ್ಲಿ ಡಾ.ರಾಜೀವ್ ರವರು ರೇಡಿಯೆಂಟ್ ಆಸ್ಪತ್ರೆ ಕ್ಲಿಯರ್ ಮಾಡಿ ಹೆಲ್ತ್ ಕೇರ್ ಜೊತೆ ವಿಲೀನ ಮಾಡಿ 2 ಕೋಟಿ ಹಣ ಪಡೆದಿದ್ದಾರೆ.ಈ ವಿಚಾರ ಜಗದೀಶ್ ರವರ ಗಮನಕ್ಕೆ ಬಂದು ಪ್ರಶ್ನಿಸಿದಾಗ ಲೆಕ್ಕ ಕೊಡುವುದಾಗಿ ಹೇಳುತ್ತಾ ಬಂದಿದ್ದಾರೆ.ಇದೇ ವೇಳೆ ಡಾ.ರಾಜೀವ್ ಪತ್ನಿ ಬಾನು ಮೃತಪಟ್ಟಿರುವ ಕಾರಣ ನೀಡಿ ಮತ್ತಷ್ಟು ಸಮಯ ಪಡೆದಿದ್ದಾರೆ.2022 ರಲ್ಲಿ ಜಗದೀಶ್ ರವರು ಸಾಮಾನ್ಯ ಸಭೆ ಕರದಾಗಲೂ ಡಾ.ರಾಜೀವ್ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ.ಹೀಗಾಗಿ ಜಗದೀಶ್ ರವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.2016 ರಲ್ಲೇ ಜಗದೀಶ್,ಸರಿತಾ ಶರ್ಮ ಹಾಗೂ ಹರಿಪ್ರಕಾಶ್ ಶರ್ಮ ಟ್ರಸ್ಟ್ ನಿಂದ ರಿಟೈರ್ ಆಗಿರುವಂತೆ ಡಾ.ರಾಜೀವ್ ರವರು ನಕಲಿ ಸಹಿ ಹಾಗೂ ದಾಖಲೆಗಳನ್ನ ಸೃಷ್ಟಿಸಿ ನ್ಯಾಯಾಲಯಕ್ಕೆ ನೀಡಿದ್ದಾರೆಂದು ಜಗದೀಶ್ ರವರು ಆರೋಪಿಸಿದ್ದಾರೆ.ಈ ಸಂಭಂಧ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಡಾ.ರಾಜೀವ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ FIR ದಾಖಲಿಸಿದ್ದಾರೆ…