ಗಂಡನ ಅಕ್ರಮ ಸಂಭಂಧ ವಿಡಿಯೋ ತೆಗೆಯಲು ಯತ್ನಿಸಿದ ಪತ್ನಿ…ಕಾರಿನಿಂದ ಢಿಕ್ಕಿ ಹೊಡೆದು ಪ್ರಿಯಕರಳ ಜೊತೆ ಎಸ್ಕೇಪ್ ಆದ ಪತಿ…

ಗಂಡನ ಅಕ್ರಮ ಸಂಭಂಧ ವಿಡಿಯೋ ತೆಗೆಯಲು ಯತ್ನಿಸಿದ ಪತ್ನಿ…ಕಾರಿನಿಂದ ಢಿಕ್ಕಿ ಹೊಡೆದು ಪ್ರಿಯಕರಳ ಜೊತೆ ಎಸ್ಕೇಪ್ ಆದ ಪತಿ…

ಮೈಸೂರು,ಫೆ4,Tv10 ಕನ್ನಡ

ಪರಸ್ರ್ತೀಯೊಂದಿಗೆ ಅಕ್ರಮ ಸಂಭಂಧ ಇರಿಸಿಕೊಂಡ ಪತಿಯ ವಿಡಿಯೋ ತೆಗೆಯಲು ಹೋದ ಪತ್ನಿ ಮೇಲೆ ಕಾರಿನಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿ ಹಾಗೂ ಪ್ರಿಯಕರಳ ಮೇಲೆ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೆಸಿ ಲೇಔಟ್ ನಿವಾಸಿಯಾದ ಪತ್ನಿ ವಿಜಯನಗರದ ಸುದೀಪ್ ಎಂಬುವರನ್ನ ವಿವಾಹವಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಸುದೀಪ್ ಪರಸ್ತ್ರೀಯೊಂದಿಗೆ ಅಕ್ರಮ ಸಂಭಂಧ ಬೆಳೆಸಿದ್ದಾರೆ.ಈ ಕುರಿತಂತೆ ಪತ್ನಿ ಸುದೀಪ್ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಹೀಗಿದ್ದೂ ಇಬ್ಬರ ಅಕ್ರಮ ಸಂಭಂಧ ಮುಂದುವರೆದಿದೆ.ವಿಜಯನಗರ 3 ನೇ ಹಂತದ ಮನೆಯೊಂದರಲ್ಲಿ ಪತಿ ಸುದೀಪ್ ತನ್ನ ಪ್ರಿಯಕರಳೊಂದಿಗೆ ಇದ್ದಾರೆಂಬ ಮಾಹಿತಿ ಅರಿತ ಪತ್ನಿ ಸ್ಥಳಕ್ಕೆ ಧಾವಿಸಿದ್ದಾರೆ.ಅಕ್ರಮ ಜೋಡಿಗಳು ಕಾರಿನಲ್ಲಿ ಕುಳಿತಿರುವ ದೃಶ್ಯ ಪತ್ನಿಗೆ ಕಂಡು ಬಂದಿದೆ.ಕೂಡಲೇ ವಿಡಿಯೋ ತೆಗೆಯಲು ಪತ್ನಿ ಮುಂದಾಗಿದ್ದಾರೆ.ಈ ವೇಳೆ ಸುದೀಪ್ ಕಾರಿನಿಂದ ಪತ್ನಿಗೆ ಢಿಕ್ಕಿ ಹೊಡೆದು ಗಾಯಗೊಳಿಸಿ ಜಾತಿ ನಿಂದನೆ ಮಾಡಿ ಪ್ರಿಯಕರಳ ಜೊತೆ ಎಸ್ಕೇಪ್ ಆಗಿದ್ದಾರೆ.ಗಾಯಗೊಂಡ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂಧ ಗಾಯಗೊಂಡ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಪ್ರಿಯಕರಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *