ಸಮಾಜ ಸೇವೆಗೆ ಮನಸ್ಸು ಮುಖ್ಯ -ಲಯನ್ ಡಾ .ಎನ್ .ಕೃಷ್ಣೇಗೌಡ*
- TV10 Kannada Exclusive
- February 5, 2024
- No Comment
- 63
ಸಮಾಜ ಸೇವೆ ಮಾಡಲು ಮನಸ್ಸು ಬಹಳ ಮುಖ್ಯ, ಒಳ್ಳೆಯ ಮನಸ್ಸಿನಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಆತ್ಮ ತೃಪ್ತಿ ಸಿಗುತ್ತದೆ ಹಾಗೂ ಅವಕಾಶ ವಂಚಿತರಾದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದಾಗ ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317ಜಿಯ ಜಿಲ್ಲಾ ರಾಜ್ಯಪಾಲರಾದ ಡಾ. ಎನ್ ಕೃಷ್ಣೆಗೌಡ ರವರು ಹೇಳಿದರು. ಅವರು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಅಧಿಕೃತ ಜಿಲ್ಲಾ ರಾಜ್ಯಪಾಲರ ಭೇಟಿ ಮತ್ತು ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಭಾಷಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ರಾಜಪಾಲರ ಮಾಸಾಚರಣೆಯ ಸಂಬಂಧದಲ್ಲಿ ಜಿಲ್ಲೆಯ ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಕೆ ದೇವೇಗೌಡರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕಾರ ಮಾಡಿ ಮಾತಾಡಿದ ಲಯನ್ ಕೆ. ದೇವೇಗೌಡರವರು ಹೆಚ್ಚು ಹೆಚ್ಚು ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚು ಜನರನ್ನು ಲಯನ್ಸ್ ಸೇರ್ಪಡೆ ಮಾಡುವ ಮೂಲಕ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಚ್ ಸಿ ಕಾಂತರಾಜು, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್ ವೆಂಕಟೇಶ್, ಜಿಲ್ಲಾ ಸಂಪುಟ ಖಜಾಂಚಿ ಎ.ಕಾಂತರಾಜ್, ಪ್ರಾಂತೀಯ ಅಧ್ಯಕ್ಷ ಹೇಮಂತ್ ಕುಮಾರ್ ಬನ್ಸಾಲಿ, ವಲಯ ಅಧ್ಯಕ್ ಕೆ ಆರ್ ಭಾಸ್ಕರಾನಂದ ,ಕಾರ್ಯದರ್ಶಿ ಸಿ.ಆರ್ ದಿನೇಶ್, ಖಜಾಂಚಿ ಕೆ .ಟಿ ವಿಷ್ಣು ಹಾಗೂ ಸೆಕೆಂಡ್ ಸೆಂಚುರಿ ಅಂಬ್ಯಾಸಿಡರ್ ಲಯನ್ ಡಾ.ಆರ್ .ಡಿ ಕುಮಾರ್ ಉಪಸ್ಥಿತರಿದ್ದರು. ಸೇವಾ ಚಟುವಟಿಕೆಯ ಅಂಗವಾಗಿ ವಿ.ಕೆ ಶಾಲೆಗೆ ಧ್ವನಿವರ್ಧಕವನ್ನು ನೀಡಲಾಯಿತು.