ಎನ್.ಆರ್.ಪೊಲೀಸರ ಕಾರ್ಯಾಚರಣೆ…ಚಾಲಾಕಿ ಮನೆಗಳ್ಳರ ಬಂಧನ…ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಎನ್.ಆರ್.ಪೊಲೀಸರ ಕಾರ್ಯಾಚರಣೆ…ಚಾಲಾಕಿ ಮನೆಗಳ್ಳರ ಬಂಧನ…ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಫೆ2,Tv10 ಕನ್ನಡ

ನರಸಿಂಹರಾಜ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಚಾಲಾಕಿ ಮನೆಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಸೈಯದ್ ಅಯೂಬ್,ಮಹಮದ್ ಮುನ್ನ ಹಾಗೂ ಪ್ರಸಾದ್.ಆ.ಆಸಿಫ್ ಬಂಧಿತರು.ಮತ್ತೋರ್ವ ಆರೋಪಿ ಫಯಾಸ್ ತಲೆ ಮರೆಸಿಕೊಂಡಿದ್ದಾನೆ.ಮೈಸೂರಿನ ಉನ್ನತಿ ನಗರದಲ್ಲಿ ಕಳುವು ಮಾಡಿದ ಚುನ್ನಾಭರಣಗಳನ್ನ ಅರ್ಧ ಬೆಲೆಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ 832 ಗ್ರಾಂ ಒಡವೆಗಳು 37 ಗ್ರಾಂ ಬೆಳ್ಳಿ ಕಾಯಿನ್ ಗಳು ಹಾಗೂ 1,70,000/- ರೂ ನಗದು ವಶಪಡಿಸಿಕೊಳ್ಳಲಾಗಿದೆ.ಮದ್ದೂರು,ಶ್ರೀರಂಗಪಟ್ಟಣ,ಕೆ.ಆರ್.ನಗರ ಹಾಗೂ ಮೈಸೂರು ಗ್ರಾಮಾಂತರ ಠಾಣೆಯ ತಲಾ ಒಂದು ಕಳುವು ಪ್ರಕರಣಗಳು ಪತ್ತೆಯಾದಂತಾಗಿದೆ.

ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ವಿರುದ್ದ ಬೆಳಗಳೂರಿನ ವಿವಿದ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳಿವೆ,ಅಲ್ಲದೆ ಮೈಸೂರಿನ ಪ್ರಸಾದ್.ಆ.ಆಸಿಫ್ ಮತ್ತು ಫಯಾಜ್ ವಿರುದ್ದ ಮೈಸೂರಿನಲ್ಲಿ ಸಾಕಷ್ಟು ಕಳುವು ಪ್ರಕರಣಗಳಿವೆ.ಈಗಾಗಲೇ ನಾಲ್ವರು ಆರೋಪಿಗಳು ಇತ್ತೀಚಗಷ್ಟೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ.ಸೈಯದ್ ಅಯೂಬ್ ಡಿ.27 ರಂದು,ಮಹಮದ್ ಮುನ್ನ ನ.29 ರಂದು,ಆಸಿಫ್ ಮತ್ತು ಫಯಾಜ್ ಜ.7 ರಂದು ಬಿಡುಗಡೆ ಆಗಿದ್ದಾರೆ.ಕಳುವು ಪ್ರಕರಣಗಳಲ್ಲಿ ಭಾಗಿ ಆಗಿ ಜೈಲು ವಾಸ ಅನುಭವಿಸಿದ್ದರೂ ಆರೋಪಿಗಳು ತಮ್ಮ ಚಾಳಿ ಮುಂದುವರೆಸಿದ್ದಾರೆ.ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ಒಂದು ತಂಡವಾದ್ರೆ ಪ್ರಸಾದ್ ಮತ್ತು ಫಯಾಸ್ ಮತ್ತೊಂದು ಗ್ಯಾಂಗ್ ಆಗಿದೆ.ಎರಡು ಗ್ಯಾಂಗ್ ಗಳು ಜೈಲಿನಲ್ಲಿ ಒಂದಾಗಿ ಕಳ್ಳತನದ ಸ್ಕೆಚ್ ಹಾಕಿ ಸಕ್ಸಸ್ ಆಗಿದ್ದಾರೆ ಎನ್ನಲಾಗಿದೆ.ಈ ಚಾಲಾಕಿಗಳು ಕೆ.ಆರ್.ನಗರದಲ್ಲಿ ಕಾರನ್ನ ಕಳುವು ಮಾಡಿ ನಂಬರ್ ಪ್ಲೇಟ್ ಬದಲಿಸಿ ನಂತರ ಬಣ್ಣದ ಸ್ಟಿಕ್ಕರ್ ಅಂಟಿಸಿ ಕೃತ್ಯವೆಸಗಿ ನಂತರ ಕಳುವು ಮಾಡಿದ ಕಾರನ್ನ ಅದೇ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ.ಮಂಡ್ಯಾದಲ್ಲಿ ವೈದ್ಯರ ಮನೆಯಲ್ಲಿ ಕೃತ್ಯವೆಸಗಿದ್ದಾರೆ.ಅಚ್ಚರಿಯ ಸಂಗತಿ ಎಂದರೆ ವೈದ್ಯರು ವಾಸ ಇರುವ ಮನೆಯ ಕೆಳಭಾಗದಲ್ಲಿ ನ್ಯಾಯಾಧೀಶರೊಬ್ಬರು ವಾಸವಿದ್ದರೂ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರಿ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಎಸಿಪಿ ಅಶ್ವತ್ಥನಾರಾಯಣ್ ಉಸ್ತುವಾರಿಯಲ್ಲಿ ಎನ್.ಆರ್.ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ನೇತೃತ್ವದಲ್ಲಿ ಪಿಎಸ್ಸೈ ಗಣೇಶ್ ಸಿಬ್ಬಂದಿಗಳಾದ ಆದಂ,ಮೋಹನ್ ಕುಮಾರ್,ಸುನಿಲ್ ಕುಮಾರ್,ದೊಡ್ಡೇಗೌಡ,ಸುರೇಶ್,ಈರೇಶ್,ಬಸವರಾಜ್ ಹಾಗೂ ಪರಶುರಾಮ್ ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

ಎನ್.ಆರ್.ಠಾಣೆ ಪೊಲೀಸರ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಪ್ರಶಂಸಿಸಿದ್ದಾರೆ..

Spread the love

Related post

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ…

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್.ವಿ. ರಾಘವೇಂದ್ರ ಅವರ…
ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್… ಮೈಸೂರು,ಜೂ30,Tv10 ಕನ್ನಡ ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ…
ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು ಮೈಸೂರು,ಜೂ29,Tv10 ಕನ್ನಡ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ…

Leave a Reply

Your email address will not be published. Required fields are marked *