ಇದು ಗಡ್ಡ ಅಲ್ಲ ಜೇನುಗೂಡು…ಜೇನುನೊಣಗಳ ರಕ್ಷಣೆಗಾಗಿ ನಿಂತ ಕುಟುಂಬದ ಸ್ಟೋರಿ ಇದು…

ಇದು ಗಡ್ಡ ಅಲ್ಲ ಜೇನುಗೂಡು…ಜೇನುನೊಣಗಳ ರಕ್ಷಣೆಗಾಗಿ ನಿಂತ ಕುಟುಂಬದ ಸ್ಟೋರಿ ಇದು…

ಪುತ್ತೂರು,ಫೆ20,Tv10 ಕನ್ನಡ

ಜೇನುನೊಣ ಅಂದ್ರೆ ಬೆಚ್ಚಿಬಿದ್ದು ಓಡುವ ಜನರೇ ಹೆಚ್ಚು.ಆದ್ರೆ ಪುತ್ತೂರಿನ ಈ ಕುಟುಂಬಕ್ಕೆ ಜೇನುನೊಣಗಳೆಂದರೆ ಅಚ್ಚುಮೆಚ್ಚು.ಅದೇನಪ್ಪಾ ಅಂಥದ್ದು ಅಂತೀರಾ..? ಈ ಕುಟುಂಬದ ದುಃಸ್ಸಾಹಸ ಕಣ್ಣಾರೆ ಕಂಡವರಿಗೇ ಗೊತ್ತು…!ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆ.ಮೂಡ್ನರು ಗ್ರಾಮದ ಪೆರ್ನಾಜೆ ಕುಮಾರ ಎಂದ್ರೆ ಜನ ಥಟ್ ಅಂತ ಅಡ್ರೆಸ್ ಹೇಳ್ತಾರೆ.ಯಾಕಂದ್ರೆ ಜೇನುಗಡ್ಡದಾರಿ ಎಂದೇ ಖ್ಯಾತಿಯಾಗಿದ್ದಾರೆ ಈ ಪೆರ್ನಾಜೆ ಕುಮಾರ್.ಜೇನುನೊಣಗಳ ಜೊತೆಗಿನ ಉತ್ತಮ ಭಾಂದವ್ಯ ಇವರಿಗೆ ಭಾರಿ ಹೆಸರನ್ನ ತಂದಿದೆ.ಗಲ್ಲದ ಮೇಲೆ ಗಡ್ಡ ಬೆಳೆಸುವುದು ಕೆಲವರ ಹವ್ಯಾಸ.ಆದ್ರೆ ಪೆರ್ನಾಜೆ ಯವರದ್ದು ವಿಭಿನ್ನ ಹವ್ಯಾಸ.ಗಡ್ಡ ಬೆಳೆಯಬೇಕಾದ ಜಾಗದಲ್ಲಿ ಜೇನುನೊಣಗಳ ಹಿಂಡನ್ನ ಬಿಟ್ಟುಕೊಳ್ಳುತ್ತಾರೆ.ಪೆರ್ನಾಜೆ ಅಂದ್ರೆ ಈ ಜೇನುನೊಣಗಳಿಗೂ ಅಷ್ಟೇ ಇಷ್ಟ ಇರಬಹುದೇನೋ ಗೊತ್ತಿಲ್ಲ.ಕಿಂಚತ್ತೂ ಕಿರಿಕ್ ಮಾಡದೆ ಗೂಡನ್ನ ಕಟ್ಟಿದಂತೆ ಗಲ್ಲದ ಮೇಲೆ ಹರಿದಾಡುತ್ತಾ ಹೇಳಿದ ಮಾತನ್ನ ಕೇಳುವ ಸಾಕು ಪ್ರಾಣಿಗಳಂತೆ ವರ್ತಿಸುತ್ತವೆ.ನೋಡುಗರ ಮೈ ಜುಂ ಎಂದರೂ ಪೆರ್ನಾಜೆ ಅವರಿಗೆ ಈ ಸಾಹಸ ನೀರು ಕುಡಿದಂತೆ.ಜೇನು ಗೂಡು ಕಟ್ಟಿದರೆ ಬೆಂಕಿ ಹಾಕಿ ಓಡಿಸುವ ದೃಶ್ಯಗಳನ್ನ ನಾವು ಕಂಡಿದ್ದೇವೆ.ಆದ್ರೆ ಇವರು ಯಾವುದೇ ಅಂಜಿಕೆಯಿಲ್ಲದೆ ಜೇನಿನ ಗೂಡಿಗೆ ಕೈ ಹಾಕಿ ಎಂಥವರನ್ನೂ ಆಶ್ಚರ್ಯಚಕಿತರಾಗುವಂತೆ ಗಲ್ಲದ ಮೇಲೆ ಬಿಟ್ಟುಕೊಳ್ಳುತ್ತಾರೆ.
ರಾಣಿಜೇನನ್ನ ಗಲ್ಲದಲ್ಲಿ ಬಿಟ್ಟಾಗ ಮುಖದ ಗುಂಪುಗುಂಪಾಗಿ ಬಂದು ಮುಖವನ್ನ ಆವರಿಸುವ ಜೇನುಹಿಂಡಿನ ದೃಶ್ಯ ಒಂದು ರೀತಿಯ ಖುಷಿ ನೀಡುತ್ತದೆ. ಈ ಸಾಹಸ ಕೇವಲ ಕುಮಾರ್ ಪೆರ್ನಾಜೆ ರವರಿಗೆ ಮಾತ್ರ ಸೀಮಿತವಾಗಿಲ್ಲ.ಇಡೀ ಕುಟುಂಬ ಇಂತಹ ಸಾಹಸಕ್ಕೆ ಮುಂದಾಗಿದೆ.ಪತ್ನಿ ಸೌಮ್ಯ ಪೆರ್ನಾಜೆ ಹಾಗೂ ಇಬ್ಬರು ಮಕ್ಕಳಾದ ಚಂದನ್,ನಂದನ್ ಕುಮಾರ್ ಸಹ ನಿರ್ಭೀತಿಯಿಂದ ಜೇನುನೊಣಗಳನ್ನ ಗಡ್ಡದ ಮೇಲೆ ಬಿಟ್ಟುಕೊಂಡು ಉತ್ತಮ ಸಂಭಂಧ ಬೆಸೆದುಕೊಂಡಿದ್ದಾರೆ. ಜೇನುಗೂಡಿಗೆ ಬೆಂಕಿಯಿಟ್ಟು ನಾಶಗೊಳಿಸುವ ಸಂಸ್ಕೃತಿ ನಮ್ಮದಾಗದೇ ಅವುಗಳನ್ನು ನಮ್ಮಂತೆ ಬದುಕಲು ಬಿಡಿ ಜೇನಿಗೋಸ್ಕರ ನಾಶ ಮಾಡಬೇಡಿರಿ ಎನ್ನುವ ಕುಮಾರ ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ ಎನ್ನುವುದು ಕುಮಾರ್ ರವರ ಮನವಿ. ಈಗಾಗಲೇ ಹಲವು ಬಾರಿ ಶಾಲಾ ಮಕ್ಕಳಿಗೆ, ರೋಟರಿಕ್ಲಬ್, ಕಾಲೇಜ್ ಮಕ್ಕಳಿಗೆ ಜೇನುಗಡ್ಡದ ಪ್ರದರ್ಶನ ನೀಡುತ್ತಾ ಇದರ ಮಹತ್ವವನ್ನ ತಿಳಿಸುತ್ತಾ ಸಾಕಷ್ಟು ಅರಿವು ಮೂಡಿಸುತ್ತಿರುವ ಕುಟುಂಬ ಪರಿಸರ ಹಾಗೂ ಪ್ರಾಣ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಿಲ್ಲಾ ತಾಲೂಕು ಸನ್ಮಾನಗಳನ್ನು ಪಡೆದಿದ್ದು ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರ ಸಿಂಚನ ಕಲಾತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿದ್ದು ಹಲವಾರು ಸಮಸ್ಯೆಗಳನ್ನು ದಾಟಿ ಬಂದಿದ್ದಾರೆ.ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುತ್ತಿದ್ದಾರೆ.ಹನಿ ಪಾರ್ಕ್ ನಲ್ಲಿ ಆಸಕ್ತಿ ಇರುವ ಜನರಿಗೆ ಜೇನು ಸಾಕಾಣಿಕೆ ಹಾಗೂ ಸಮಾಜಕ್ಕೆ ಮತ್ತು ಪರಿಸರ ರಕ್ಷಣೆಗೆ ಸಹಕಾರಿ ಹೇಗೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಇಡೀ ಕುಟುಂಬವೇ ಕೃಷಿವಲಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದೆ. ಪರಿಸರ ಉಳಿವಿಗಾಗಿ ಸಹಕಾರಿಯಾಗುವ ಜೇನುಗಳ ರಕ್ಷಣೆಗೆ ಬದ್ದವಾಗಿರುವ ಈ ಕುಟುಂಬ ಆಶಯಗಳು ಎಲ್ಲರಿಗೂ ಮಾದರಿಯಾಗಬೇಕಿದೆ…

Spread the love

Related post

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಪಿರಿಯಾಪಟ್ಟಣ,ಮಾ18,Tv10 ಕನ್ನಡ ಯುವಕನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಜ್ವಲ್ (21) ಹಲ್ಲೆಗೊಳಗಾದ ಯುವಕ. ಪಿರಿಯಾಪಟ್ಟಣ ತಾಲ್ಲೂಕು…
ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಮೈಸೂರು,ಮಾ17,Tv10 ಕನ್ನಡ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ…
ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಮೈಸೂರು,ಮಾ17,Tv10 ಕನ್ನಡ ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ…

Leave a Reply

Your email address will not be published. Required fields are marked *