ಸಾಲದ ಹಣಕ್ಕೆ ಟಾರ್ಚರ್…ಗೃಹಿಣಿ ಹ್ಯಾಂಗ್…ಮೂವರು ಅಂದರ್…
- TV10 Kannada Exclusive
- February 22, 2024
- No Comment
- 454
ಮೈಸೂರು,ಫೆ22,Tv10 ಕನ್ನಡ
ಸಾಲದ ಹಿಂದಿರುಗಿಸುವಂತೆ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಗೃಹಿಣಿ ನೇಣುಬಿಗಿದು ಆತ್ಮಹತ್ಯೆ ಶರಣಾದ ಘಟನೆ ಮೈಸೂರಿನ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಹನಾ ಶರೀನ್ (25) ಮೃತ ಗೃಹಿಣಿ.ಹಣಕ್ಕಾಗಿ ಪೀಡಿಸಿದ ಸಂಘ ಸಂಸ್ಥೆಯೊಂದ ಪ್ರಮುಖರಾದ ಫರ್ಜಾನಾ,ನಾಜಿಯಾ ಹಾಗೂ ಮುಬಾರಕ್ ರನ್ನ ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಶೋಕಾ ರಸ್ತೆ ನಿಜಾಮಿಯಾ ಸ್ಕೂಲ್ ಹಿಂಬಾಗದ ಮನೆಯೊಂದರಲ್ಲಿ ವಾಸವಿದ್ದ ಶಹನಾ ಶಿರೀನ್ ಮೂರು ಸಂಘ ಸಂಸ್ಥೆಯೊಂದರಲ್ಲಿ ಸದಸ್ಯರಾಗಿದ್ದರು.ಪತಿಗೆ ಗೂಡ್ಸ್ ವಾಹನ ಕೊಡಿಸುವ ಸಲುವಾಗಿ ಮೂರು ಸಂಘಗಳಿಂದ ತಲಾ 50 ಸಾವಿರದಂತೆ 1,50,000/- ಸಾಲ ಪಡೆದಿದ್ದರು.ಮೂರು ತಿಂಗಳ ಹಿಂದೆ ಪಡೆದ ಸಾಲಕ್ಕೆ ಆಗಲೇ 50 ಸಾವಿರ ಬಡ್ಡಿ ಕಟ್ಟಿದ್ದರು.ಹೀಗಿದ್ದೂ ಸಾಲದ ಹಣ ಹಿಂದಿರುಗಿಸುವಂತೆ ಫರ್ಜಾನಾ,ನಾಜಿಯಾ,ಮುಬಾರಕ್ ರವರು ಕಿರುಕುಳ ನೀಡುತ್ತಿದ್ದರು.ಎರಡು ದಿನಗಳ ಹಿಂದೆ ಮನೆಗೆ ಬಂದು ಶಹನಾ ಶಿರೀನ್ ಬಳಿ ಇದ್ದ ಮೊಬೈಲ್ ಸಹ ಕಿತ್ತುಕೊಂಡು ಹೋಗಿದ್ದರು.ಹೀಗಿದ್ದೂ ನಿರಂತರವಾಗಿ ಅಸಲು ಹಾಗೂ ಬಡ್ಡಿಗಾಗಿ ಟಾರ್ಚರ್ ನೀಡುತ್ತಿದ್ದರು.ಇದರಿಂದ ಬೇಸತ್ತ ಶಹನಾ ಶಿರೀನ್ ಪತಿ ಅಯೂಬ್ ಖಾನ್ ಗೆ ಫೋನ್ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಾರೆ.ಪತಿ ಅಯೂಬ್ ಖಾನ್ ಮನೆಗೆ ತಲುಪುವಷ್ಟರಲ್ಲಿ ಶಹನಾ ಶಿರೀನ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಪತ್ನಿಯ ಸಾವಿಗೆ ಮೂವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ಪತಿ ಅಯೂಬ್ ಖಾನ್ ಕಾನೂನು ಕ್ರಮ ಜರುಗಿಸುವಂತೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಾಲಕ್ಕಾಗಿ ಕಿರುಕುಳ ನೀಡಿದ ಮೂವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ…