ಪ್ರೀತ್ಸೇ..ಪ್ರೀತ್ಸೇ..ಎಂದು ಯುವತಿಗೆ ಟಾರ್ಚರ್…ಖಾಸಗಿ ಫೋಟೂ ತೆಗೆದು ಬ್ಲಾಕ್ ಮೇಲ್…ಸೈಕೋ ವಿರುದ್ದ FIR…

ಮೈಸೂರು,ಮಾ11,Tv10 ಕನ್ನಡ

ಪ್ರೀತ್ಸೇ ಪ್ರೀತ್ಸೇ ಎಂದು ಯುವತಿಯನ್ನ ಪೀಡಿಸುತ್ತಿರುವ ಸೈಕೋ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ಯುವತಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.ವಿಜಯನಗರ ಬಡಾವಣೆಯ ನಿಖಿಲ್ ಹಾಗೂ ಈತನ ತಂದೆ ಸುಂದರ್ ಮತ್ತು ತಾಯಿ ಸರೋಜ ವಿರುದ್ದ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಕ್ಕದ ಮನೆಯಲ್ಲಿ ವಾಸವಿರುವ ನಿಖಿಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಯುವತಿಯ ಹಿಂದೆ ಬಿದ್ದು ನನ್ನನ್ನೇ ಪ್ರೀತಿಸುವಂತೆ ಬೆದರಿಸಿದ್ದಾನೆ.ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಧಂಕಿ ಹಾಕಿದ್ದಾನೆ.ಬೇರೆ ಮದುವೆ ಆದ್ರೆ ಮುರಿದು ಬೀಳುವಂತೆ ಮಾಡುವುದಾಗಿ ಹೆದರಿಸಿದ್ದಾನೆ.ಯುವತಿಯ ಖಾಸಗಿ ಫೋಟೋಗಳನ್ನ ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.ಯುವತಿಯಿಂದ ಹಂತಹಂತವಾಗಿ 2 ಲಕ್ಷ ಹಣ ಪಡೆದಿದ್ದಾನೆ.ಯುವತಿಯ ದ್ವಿಚಕ್ರ ವಾಹನವನ್ನ ಕಿತ್ತುಕೊಂಡು ಹೋಗಿದ್ದಾನೆ.ತನ್ನ ಜೊತೆ ಮಾತನಾಡದಿದ್ರೆ ಮನೆ ಮುಂದೆ ನಿಂತು ಹೆಸರು ಹಿಡಿದು ಕೂಗುತ್ತಾ ಸೈಕೋ ರೀತಿ ವರ್ತಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಿದ್ದಾನೆ.ನಿಖಿಲ್ ವರ್ತನೆಗೆ ತಂದೆ ಸುಂದರ್ ಹಾಗೂ ತಾಯಿ ಸರೋಜ ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿರುವ ಯುವತಿ ಮೂವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.FIR ದಾಖಾಗುತ್ತಿದ್ದಂತೆಯೇ ನಿಖಿಲ್ ನಾಪತ್ತೆಯಾಗಿದ್ದಾನೆ.ಸೈಕೋ ನಿಖಿಲ್ ಬಂಧನಕ್ಕೆ ವಿಜಯನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *