ನೀರಿನಲ್ಲಿ ವಿಷ ಬೆರೆಸಿ ಅಣ್ಣನ ಮಗನ ಕೊಲೆ ಯತ್ನ ಆರೋಪ…ಚಿಕ್ಕಪ್ಪ ಸೇರಿದಂತೆ ಐವರ ವಿರುದ್ದ FIR ದಾಖಲು…

ನೀರಿನಲ್ಲಿ ವಿಷ ಬೆರೆಸಿ ಅಣ್ಣನ ಮಗನ ಕೊಲೆ ಯತ್ನ ಆರೋಪ…ಚಿಕ್ಕಪ್ಪ ಸೇರಿದಂತೆ ಐವರ ವಿರುದ್ದ FIR ದಾಖಲು…

ಮೈಸೂರು,ಮಾ16,Tv10 ಕನ್ನಡ

ಸಾಲದ ಹಣ ಕೇಳಲು ಮನೆಗೆ ಬಂದ ಅಣ್ಣನ ಮಗನನ್ನ ಚಿಕ್ಕಪ್ಪ ಹಾಗೂ ಕುಟುಂಬಸ್ಥರು ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.ಈ ಸಂಭಂಧ ಚಿಕ್ಕಪ್ಪ ಸೇರಿತೆ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪ ಪ್ರಕರಣ ದಾಖಲಾಗಿದೆ.ಬೆಳವಾಡಿಯ ಪ್ರಭಾಕರ್ ಎಂಬುವರನ್ನ ಕೊಲೆಗೆ ಯತ್ನಿಸಿದ ಆರೋಪದಡಿ ಚಿಕ್ಕಪ್ಪ ಶ್ರೀನಿವಾಸ,ಪತ್ನಿ ಗೀತಾ,ಮಕ್ಕಳಾದ ಸಂಜು,ರಂಜು ಹಾಗೂ ಗೀತಾ ತಂದೆ ಕೃಷ್ಣಪ್ಪ ಎಂಬುವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಪ್ರಭಾಕರ್ ರವರು ತಮ್ಮ ಚಿಕ್ಕಪ್ಪ ಶ್ರೀನಿವಾಸ್ ಗೆ 16 ಲಕ್ಷ ಸಾಲ ನೀಡಿದ್ದಾರು.ಸಾಲ ವಾಪಸಾತಿಗಾಗಿ 13 ಲಕ್ಷದ ಚೆಕ್ ನೀಡಿದ್ದರು.ನಗದೀಕರಿಸಲು ಬ್ಯಾಂಕ್ ಗೆ ಚೆಕ್ ಪ್ರೆಸೆಂಟ್ ಮಾಡಿದಾಗ ಬೌನ್ಸ್ ಆಗಿದೆ.ಈ ಬಗ್ಗೆ ಫೋನ್ ಮಾಡಿದಾಗ ಮನೆಗೆ ಬರುವಂತೆ ತಿಳಿಸಿದ್ದಾರೆ.ಮನೆಗೆ ಬಂದ ಪ್ರಭಾಕರ್ ಗೆ ಹಣ ನೀಡುವುದಿಲ್ಲವೆಂದು ಹೇಳಿದ್ದಾರೆ.ಇದೇ ವೇಳೆ ಪ್ರಭಾಕರ್ ಕುಡಿಯಲು ನೀರು ಕೇಳಿದ್ದಾರೆ.ಗೀತಾ ರವರು ಅಡುಗೆ ಮನೆಯಿಂದ ನೀರು ತಂದು ಕೊಟ್ಟಿದ್ದಾರೆ.ನೀರು ಕುಡಿಯುತ್ತಿದ್ದಂತೆಯೇ ಪ್ರಭಾಕರ್ ಗೆ ತಲೆ ಸುತ್ತಿದ್ದಂತಾಗಿದೆ.ಈ ಸಮಯದಲ್ಲಿ ಶ್ರೀನಿವಾಸ್,ಸಂಜು,ರಂಜು ಹಾಗೂ ಕೃಷ್ಣಪ್ಪ ರವರು ಹಲ್ಲೆ ನಡೆಸಿದ್ದಾರೆ.ಐವರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಮನೆಯಿಂದ ಹೊರಬಂದ ಪ್ರಭಾಕರ್ ಸ್ವಲ್ಪದೂರ ತೆರಳಿದ ನಂತರ ಪ್ರಜ್ಞೆತಪ್ಪಿ ಬಿದ್ದಿದ್ದಾರೆ.ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾದ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಿಜಯನಗರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್,ಗೀತಾ,ಸಂಜು,ರಂಜು,ಕೃಷ್ಣಪ್ಪ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *