ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗುರುವಂದನೆ…ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಭಿನಂದನೆ…
- TV10 Kannada Exclusive
- April 2, 2024
- No Comment
- 245
ಅಯೋಧೆಯ್ಯಿಂದ ಮರಳಿದ ಪೇಜಾವರ
ಮೈಸೂರು,ಏ2,Tv10 ಕನ್ನಡ
ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಅಯೋಧ್ಯೆಯಲ್ಲಿ ಬಾಲರಾಮಚಂದ್ರ ದೇವರನ್ನು ಪ್ರತಿಷ್ಠಾಪನೆ ಮಾಡಿ, 48 ದಿನಗಳ ಮಂಡಲೋತ್ಸವ ಹಾಗೂ ಮಂಗಳೋತ್ಸವ ಯಶಸ್ವಿಯಾಗಿ ಪೂರೈಸಿ ಮೈಸೂರಿಗೆ ಆಗಮಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ರವರ ನೇತೃತ್ವದಲ್ಲಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರವಿ ಶಾಸ್ತ್ರಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉದ್ಯಮಿ ಅಪೂರ್ವ ಸುರೇಶ್, ಡಾಕ್ಟರ್ ಕೆ ಚಕ್ರಪಾಣಿ, ಎಸ್ ಬಿ ವಾಸುದೇವಮೂರ್ತಿ, ಮಿರ್ಲೆ ಪನೀಶ್, ಸುಚಿಂದ್ರ, ಮಂಜುನಾಥ್, ಹಾಗೂ ಇನ್ನಿತರ ಭಕ್ತಾದಿಗಳು ಹಾಜರಿದ್ದರು..