ಬಾಡಿಗೆಗೆ ಕಾರು ಪಡೆದು ಗಿರವಿ ಇಟ್ಟ ಭೂಪರು…ಮನನೊಂದ ಮಾಲೀಕ ನೇಣಿಗೆ ಶರಣು…ಡೆತ್ ನೋಟ್ ಬರೆದು ಆತ್ಮಹತ್ಯೆ…

ಬಾಡಿಗೆಗೆ ಕಾರು ಪಡೆದು ಗಿರವಿ ಇಟ್ಟ ಭೂಪರು…ಮನನೊಂದ ಮಾಲೀಕ ನೇಣಿಗೆ ಶರಣು…ಡೆತ್ ನೋಟ್ ಬರೆದು ಆತ್ಮಹತ್ಯೆ…

ಮೈಸೂರು,ಏ5,Tv10 ಕನ್ನಡ

ಬಾಡಿಗೆಗೆ ಕಾರ್ ಪಡೆದ ಭೂಪರು ಗಿರವಿ ಇಟ್ಟ ಹಿನ್ನಲೆ ಮನನೊಂದ ಕಾರ್ ಮಾಲೀಕ ಡೆತ್ ನೋಟ್ ಬರೆದು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.ಮುಜಾಹಿದ್ ಪಾಷಾ ಮೃತ ದುರ್ದೈವಿ.ಪತಿಯ ಸಾವಿಗೆ ಕಾರಣರಾದ ಅಸ್ಗರ್ ಪಾಷಾ ಹಾಗೂ ಸಲ್ಲು ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರು ಬಾಡಿಗೆ ಕೊಡುವ ವೃತ್ತಿಯಲ್ಲಿದ್ದ ಮುಜಾಹಿದ ಪಾಷಾ ತಮ್ಮ ಇನೋವಾ ಕಾರನ್ನ ಅಸ್ಗರ್ ಪಾಷಾ ಹಾಗೂ ಸಲ್ಲುಗೆ ಬಾಡಿಗೆಗಾಗಿ ನೀಡಿದ್ದಾರೆ.ಅಲ್ಲದೆ ಸ್ವಲ್ಪ ಸಾಲದ ಹಣವನ್ನೂ ಸಹ ನೀಡಿದ್ದಾರೆ.ಬಾಡಿಗೆಗೆ ಪಡೆದ ಕಾರನ್ನ ಅಸ್ಗರ್ ಪಾಷಾ ಹಾಗೂ ಸಲ್ಲು ರವರು ಗಿರವಿ ಇಟ್ಟಿದ್ದಾರೆ.ಜೊತೆಗೆ ಸಾಲದ ಹಣವನ್ನೂ ಸಹ ಹಿಂದಿರುಗಿಸದೆ ವಂಚಿಸಿದ್ದಾರೆ.ಇದರಿಂದ ಮನನೊಂದಿದ್ದ ಮುಜಾಹಿದ್ ಪಾಷಾ ಪತ್ನಿಯ ಜೊತೆ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.ರಂಜಾನ್ ಹಬ್ಬದ ಹಿನ್ನಲೆ ಮಕ್ಕಳಿಗೆ ಬಟ್ಟೆ ತರುವಂತೆ ಪತ್ನಿಗೆ ಹಣ ಕೊಟ್ಟು ಕಳುಹಿಸಿದ ಮುಜಾಹಿದ್ ಪಾಷಾ ತಮ್ಮ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತಿಯ ಸಾವಿಗೆ ಅಸ್ಗರ್ ಪಾಷಾ ಹಾಗೂ ಸಲ್ಲು ರವರೇ ಕಾರಣವೆಂದು ಆರೋಪಿಸಿರುವ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *