ಶ್ರೀನಿವಾಸ್ ಪ್ರಸಾದ್- ಸಿದ್ದು ಭೇಟಿ…ಮುನಿಸು ಮರೆತ ಉಭಯ ನಾಯಕರು…ನಮ್ಮ ಪಕ್ಷದ ಬಗ್ಗೆ ಸಿಂಪತಿ ಇರಲಿ ಎಂದ ಸಿಎಂ…
- TV10 Kannada Exclusive
- April 13, 2024
- No Comment
- 245

ಮೈಸೂರು,ಏ13,Tv10 ಕನ್ನಡ

ಕೊನೆಗೂ ಲೋಕಸಭಾ ಚುನಾವಣೆ ಇಬ್ಬರು ನಾಯಕರನ್ನ ಮುಖಾಮುಖಿ ಭೇಟಿ ಮಾಡಿಸುವ ವಾತಾವರಣ ಕಲ್ಪಿಸಿದೆ.ಕೆಲವು ರಾಜಕೀಯ ಬೆಳವಣಿಗೆ ಹಿನ್ನಲೆ ಆಪ್ತಸ್ನೇಹಿತರಾಗಿದ್ದ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಇಬ್ಬರೂ ಮುನಿಸಿಕೊಂಡಿದ್ದರು.ಸುಮಾರು ಆರು ವರ್ಷಗಳ ಕಾಲ ಪರಸ್ಪರ ಹೇಳಿಕೆಗಳನ್ನ ನೀಡುವ ಮೂಲಕ ಬಹಿರಂಗವಾಗಿ ಕಿತ್ತಾಡಿದ್ದರು.ಇದೀಗ ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆಯೇ ಮುನಿಸು ಮರೆತ ರಾಜಕೀಯ ದಿಗ್ಗಜರು ಭೇಟಿ ಮಾಡಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಸುಮಾರು ಒಂದು ಗಂಟೆ ಕಾಲ ಮಾತನಾಡಿದ ನಾಯಕರು ಅಚ್ಚರಿ ಮೂಡಿಸಿದ್ದಾರೆ.ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ನಾನು ಯಾವುದೇ ರಾಜಕೀಯ ವಿಷಯವನ್ನು ಪ್ರಸ್ತಾಪ ಮಾಡಿಲ್ಲ ಎಂದರು.
ಶ್ರೀನಿವಾಸ ಪ್ರಸಾದ್ ಮತ್ತು ನಾನು ಬಹಳ ದೀರ್ಘಕಾಲದ ಸ್ನೇಹಿತರಾಗಿದ್ದವರು,ಆಪ್ತರಾಗಿದ್ದವರು,ಅವರ ಆರೋಗ್ಯ ವಿಚಾರಿಸಲೆಂದು ಭೇಟಿ ಮಾಡಿದ್ದೇನೆ ಯಾವುದೇ ರಾಜಕೀಯ ವಿಷಯ ಮಾತನಾಡಿಲ್ಲ.
ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ.ಯಾವುದೇ ರಾಜಕೀಯ ಪಕ್ಷಕ್ಕೂ ಬೆಂಬಲವಿಲ್ಲ ತಟಸ್ಥ ವಾಗಿರುವುದಾಗಿ ಹೇಳಿದ್ದಾರೆ ಹಾಗಾಗಿ ನಾನು ರಾಜಕೀಯ ಮಾತನಾಡಲಿಲ್ಲಾ,ಆದರೆ ನಮ್ಮ ಪಕ್ಷದ ಬಗ್ಗೆ ಸಿಂಪತಿ ಇರಲಿ ಎಂದು ಮನವಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.ಲೋಕಸಭಾ ಚುನಾವಣೆ ಹೊತ್ತಲ್ಲಿ ಪ್ರತಿಷ್ಠೆಯನ್ನ ಬದಿಗೊತ್ತಿದ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಮುಂದಾಗಿದ್ದಾರೆ.ತಮ್ಮ ತವರು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಆಪ್ತಗೆಳೆಯನನ್ನ ಇಂದು ಭೇಟಿಯಾಗಿರುವುದು ಭಾರಿ ಚರ್ಚೆಗೂ ಗ್ರಾಸವಾಗುತ್ತಿದೆ…