ಬಸ್ ತಂಗುದಾಣವನ್ನೇ ನುಂಗಿದ ಅಪಘಾತಕ್ಕೆ ಸಿಲುಕಿದ ವಾಹನ…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…

ಬಸ್ ತಂಗುದಾಣವನ್ನೇ ನುಂಗಿದ ಅಪಘಾತಕ್ಕೆ ಸಿಲುಕಿದ ವಾಹನ…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…

ಮೈಸೂರು,ಏ13,Tv10 ಕನ್ನಡ

ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಲಾರಿಯೊಂದು ಬಸ್ ತಂಗುದಾಣವನ್ನ ಆವರಿಸಿಕೊಂಡು ಬಸ್ ಗಾಗಿ ಕಾದುನಿಂತ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಸಮೀಪವಿರುವ ಬಸ್ ತಂಗುದಾಣದ ಬಳಿ ಈ ದೃಶ್ಯ ಕಂಡು ಬಂದಿದೆ.ಬಸ್ ಪ್ರಯಾಣಿಕರು ಬಸ್ ಗಾಗಿ ಕಾಯುವ ಉದ್ದೇಶದಿಂದ ವಿವಿ ಪುರಂ ಸಂಚಾರಿ ಠಾಣೆ ಸಮೀಪ ಮೈಸೂರು ಮಹಾನಗರ ಪಾಲಿಕೆ ತಂಗುದಾಣ ನಿರ್ಮಿಸಿದೆ.ಆದರೆ ಈ ಬಸ್ ತಂಗುದಾಣವನ್ನ ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಲಾರಿ ಮುಚ್ಚಿಹಾಕಿದೆ.ಬಸ್ ಗಾಗಿ ತಂಗುದಾಣದಲ್ಲಿ ಇರಬೇಕಿದ್ದ ಪ್ರಯಾಣಿಕರು ಲಾರಿ ಅಡ್ಡನಿಂತ ಪರಿಣಾಮ ರಸ್ತೆ ಮೇಲೆ ಬಂದು ನಿಂತಿದ್ದಾರೆ.ಅಪಘಾತಕ್ಕೆ ಸಿಲುಕಿ ಪೊಲೀಸರ ವಶದಲ್ಲಿರುವ ವಾಹನಗಳನ್ನ ಪಾರ್ಕಿಂಗ್ ಮಾಡಲು ಠಾಣೆಯ ಹಿಂಭಾಗ ಸ್ಥಳ ಮೀಸಲಿದೆ.ಹೀಗಿದ್ದೂ ಅಪಘಾತಕ್ಕೆ ಸಿಲುಕಿ ಹಾನಿಯಾದ ಲಾರಿ ತಂಗುದಾಣದ ಮುಂಭಾಗ ನಿಲ್ಲಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ.ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗುವ ವಾಹನಗಳನ್ನ ಧಿಢೀರ್ ಪ್ರತ್ಯಕ್ಷವಾಗಿ ಲಾಕ್ ಮಾಡಿ ದಂಡ ವಸೂಲಿ ಮಾಡುವ ಸಂಚಾರಿ ಪೊಲೀಸರಿಗೆ ಈ ಲಾರಿ ಉಂಟು ಮಾಡುತ್ತಿರುವ ಕಿರಿಕಿರಿ ಕಾಣಿಸುತ್ತಿಲ್ಲವೇ…?ಕೂಡಲೇ ಸಂಚಾರಿ ಪೊಲೀಸರು ಎಚ್ಚೆತ್ತು ಲಾರಿಯನ್ನ ತೆರುವುಗೊಳಿಸಿ ಬಸ್ ತಂಗುದಾಣಕ್ಕೆ ಮುಕ್ತಿ ನೀಡುವರೇ…?

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *