ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ಅಡ್ವೋಕೇಟ್ ಮೇಲೆ ಹಲ್ಲೆ…ಮೂವರ ವಿರುದ್ದ FIR ದಾಖಲು…
- TV10 Kannada Exclusive
- April 14, 2024
- No Comment
- 281
ಮೈಸೂರು,ಏ14,Tv10 ಕನ್ನಡ
ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ಅಡ್ವೋಕೇಟ್ ಮೇಲೆ ಮೂವರು ವ್ಯಕ್ತಿಗಳು ಗಲಾಟೆ ತಗಾದೆ ತೆಗೆದು ಹಲ್ಲೆ ನಡೆಸಿದ ಘಟನೆ ಅಶೋಕಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರದಲ್ಲಿ ನಡೆದಿದೆ.ಘಟನೆಯಲ್ಲಿ ಅಡ್ವೊಕೇಟ್ ಸುನಿಲ್ ಕುಮಾರ್ ಗಾಯಗೊಂಡಿದ್ದಾರೆ.ನಂಜುಂಡ ಹಾಗೂ ಆತನ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿದ್ದಾರೆ.ಸ್ನೇಹಿತರೊಂದಿಗೆ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದಾಗ ಏಕಾಏಕಿ ಬಂದ ನಂಜುಂಡ ಗಲಾಟೆ ತೆಗೆದು ತಳ್ಳಾಡಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ.ತಾನು ಅಡ್ವೋಕೇಟ್ ಎಂದು ಹೇಳಿದ್ರೂ ಗಣನೆಗೆ ತೆಗೆದುಕೊಳ್ಳದೆ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಸುನಿಲ್ ಕುಮಾರ್ ಚಿಕಿತ್ಸೆ ಪಡೆದು ನಂತರ ಅಶೋಕಾಪುರಂ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.ನಂಜುಂಡಚಹಾಗೂ ಇಬ್ಬರ ಮೇಲೆ ಅಶೋಕಾಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ…