ಯದುವೀರ್ ದಂಪತಿಯಿಂದ ಮಹಾರಾಜ ಕಾಲೇಜು ಮೈದಾನ ಸ್ವಚ್ಛತೆ…ಸಾಥ್ ನೀಡಿದ ಅಭಿಮಾನಿಗಳು…
- TV10 Kannada Exclusive
- April 15, 2024
- No Comment
- 89
ಮೈಸೂರು,ಏ15,Tv10 ಕನ್ನಡ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಖಾ ಒಡೆಯರ್ ಅವರೊಂದಿಗೆ ಸೇರಿ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ವಚ್ಛಗೊಳಿಸಲು ಮುಂದಾದರು.ನಿನ್ನೆ ನಡೆದ ಮೋದಿ ರಾಲಿ ನಂತರ ಮೈದಾನದಲ್ಲಿ ತುಂಬಿದ ಜನಸಾಗರದಿಂದ ಕಸಮಯವಾಗಿತ್ತು.ಅಲ್ಲಲ್ಲಿ ಹರಡಿದ್ದ ಕಸವನ್ನು ಯದುವೀರ್ ತಮ್ಮ ಅಭಿಮಾನಿಗಳು ಹಾಗೂ ನಗರಪಾಲಿಕೆ ಸಿಬ್ಬಂದಿಗಳ ಜೊತೆ ಸೇರಿ ಸ್ವಚ್ಚಗೊಳಿಸಿದರು.
ಇಂದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರಿಗೆ ಯದುವೀರ್ ಅವರು ಕೃತಜ್ಞತೆ ಸಲ್ಲಿಸಿದರು.ಹಾಗೆ ಕಸವನ್ನು ಆದಷ್ಟು ಬೇಗ ಮೈದಾನದಿಂದ ತೆರವುಗೊಳಿಸುವಂತೆ ಮನವಿ ಮಾಡಿದರು.
ತ್ರಿಶಿಖಾ ಅವರೊಂದಿಗೆ ಯದುವೀರ್ ಕೂಡ ತ್ಯಾಜ್ಯವನ್ನು ಆರಿಸಿದ ಬೆಳವಣಿಗೆ ಎಲ್ಲರ ಗಮನ ಸೆಳೆಯಿತು.
ಕೆಲವು ಸ್ವಯಂಸೇವಕರು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ‘ನಗರವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಮೋದಿಜಿಯವರ ಕಾರ್ಯಕ್ರಮದ ನಂತರ ಮೈದಾನವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಮತ್ತು ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಪ್ರಧಾನಮಂತ್ರಿ ಉಪಕ್ರಮದ ಸ್ವಚ್ ಭಾರತ್ ಅಭಿಯಾನಕ್ಕೆ ಅನುಗುಣವಾಗಿದೆ.
ಮೈಸೂರು ನಗರದ ಸ್ವಚ್ಟತೆಗೆ ನನ್ನ ಮೊದಲ ಆದ್ಯತೆ’ ಇದು ಇನ್ನೂ ಮುಂದೆಯೂ ಮುಂದುವರೆಯುತ್ತದೆ ಎಂದರು…