ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಮೈಸೂರು,ಏ16,Tv10 ಕನ್ನಡ

ಲಾಡ್ಜ್ ನಲ್ಲಿ ಹೆತ್ತಮಗನನ್ನ ಒಂಟಿಯಾಗಿ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಬಾಲಕನನ್ನ ತಮ್ಮ ವಶಕ್ಕೆ ಪಡೆದ ಪೊಲೀಸರು ಮಹಿಳೆಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ತುಮಕೂರು ಮೂಲದ ಭಾರ್ಗವಿ ಮಗನನ್ನ ಲಾಡ್ಜ್ ನಲ್ಲಿ ಬಿಟ್ಟುಹೋದ ಮಹಿಳೆ.ಎರಡು ದಿನಗಳ ಹಿಂದೆ ಭಾರ್ಗವಿ ತನ್ನ ಮಗ ಶಶಾಂಕ್ ಜೊತೆ ಮೈಸೂರಿಗೆ ಬಂದು ವೈಶಾಖ್ ಹೋಟೆಲ್ ನಲ್ಲಿ ತಂಗಿದ್ದಾರೆ.ಇಂದು ಬೆಳಿಗ್ಗೆ ಚೆಕ್ ಔಟ್ ಇದ್ದ ಕಾರಣ ವ್ಯವಸ್ಥಾಪಕರಾದ ಅರುಣ್ ಕುಮಾರ್ ಕೊಠಡಿಗೆ ಬಂದಾಗ ಶಶಾಂಕ್ ಒಬ್ಬನೇ ಇರುವುದು ಬೆಳಕಿಗೆ ಬಂದಿದೆ.ತಾಯಿ ಹೊರಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಲಾಡ್ಜ್ ನ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ಮಾಡಿದಾಗ ಭಾರ್ಗವಿ ರವರು ಮುಂಜಾನೆ 3 ಗಂಟೆ ವೇಳೆಯಲ್ಲಿ ಸೆಲ್ಲಾರ್ ಮೂಲಕ ನಿರ್ಗಮಿಸಿರುವ ದೃಶ್ಯ ಸೆರೆಯಾಗಿದೆ.ಕೂಡಲೇ ಬಾಲಕ ಶಶಾಂಕ್ ನ್ನ ಲಷ್ಕರ್ ಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.ಭಾರ್ಗವಿ ರವರ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಮಧ್ಯಾಹ್ನದ ವೇಳೆ ಪತ್ತೆಯಾಗಿದ್ದಾರೆ.

ಭಾರ್ಗವಿ ತಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದು ಮೈಸೂರಿನ ಯುವಕನೊಬ್ಬನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಳೆ.ಯುವಕನ ಮನೆಗೆ ತೆರಳಿ ಭಾರ್ಗವಿ ರಂಪಾಟ ಮಾಡಿದ್ದಾಳೆಂದು ಹೇಳಲಾಗಿದೆ.ನಂತರ ಭಾರ್ಗವಿ ರವರ ಪೋಷಕರಿಗೆ ಪೊಲೀಸರು ವಿಚಾರ ಮುಟ್ಟಿಸಿದ್ದಾರೆ.ಬಾಲಕ ಶಶಾಂಕ್ ನ್ನ ಪೊಲೀಸರು ಬಾಲ ಮಂದಿರ ವಶಕ್ಕೆ ನೀಡಿದ್ದು ಇದೀಗ ಭಾರ್ಗವಿ ಹಾಗೂ ಶಶಾಂಕ್ ನ್ನ ಸುರಕ್ಷಿತವಾಗಿ ಪೋಷಕರನ್ನ ಸೇರಿಸಲು ಲಷ್ಕರ್ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *