ಮೈಸೂರು:ಗೋಮಾಂಸ ಮಾರಾಟ…ಓರ್ವನ ಬಂಧನ…
- TV10 Kannada Exclusive
- April 16, 2024
- No Comment
- 260
ಮೈಸೂರು,ಏ16,Tv10 ಕನ್ನಡ
ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸರ್ವರ್ ಬಂಧಿತ ಆರೋಪಿ.ಈತ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್.ಮೊಹಲ್ಲಾದ ಎ.ಜೆ.ಬ್ಲಾಕ್ ನಲ್ಲಿ ಇರುವ ತನ್ನ ಮಾಂಸದ ಅಂಗಡಿಯಲ್ಲಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದಾರೆ.ಅಂಗಡಿಯಲ್ಲಿ ಗೋವಿನ ಮಾಂಸ ನೇತುಹಾಕಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದನೆಂದು ತಿಳಿದುಬಂದಿದೆ.ನಂಜನಗೂಡಿನ ರೈತರೊಬ್ಬರ ಬಳಿ ದನವನ್ನ ಖರೀದಿಸಿ ಹತ್ಯೆ ಮಾಡಿ ಮಾಂಸ ತೆಗೆದ ನಂತರ ತಲೆ,ಚರ್ಮ,ಕಾಲು ಸೇರಿದಂತೆ ಇತರ ಭಾಗಗಳನ್ನ ಕಾಲುವೆಗೆ ಬಿಸಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…