ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ ಚಿನ್ನಾಭರಣ ವಶ…
- TV10 Kannada Exclusive
- April 16, 2024
- No Comment
- 246
ಮಡಿಕೇರಿ,ಏ16,Tv10 ಕನ್ನಡ
ಮನೆ ಬಾಗಿಲು ಮೀಟಿ 15 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿದ ಚೋರರನ್ನ ಬಂಧಿಸುವಲ್ಲಿ ಭಾಗಮಂಡಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ 14.50 ಲಕ್ಷ ಮೌಲ್ಯದ 177 ಗ್ರಾಂ ಚಿನ್ನಾಭರಣ,ಕೃತ್ಯಕ್ಕೆ ಬಳಸಿದ ಒಂದು ಯಮಹಾ ಬೈಕ್,2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಎಲ್.ಅರುಣ್ ರವರ ನೇತೃತ್ವದ ತಂಡದ ಯಶಸ್ವಿ ಕಾರ್ಯಾಚರಣೆಯನ್ನ ಜಿಲ್ಲಾ ಎಸ್ಪಿ ರಾಮರಾಜನ್ ರವರು ಪ್ರಶಂಸಿಸಿದ್ದಾರೆ.
ಮಡಿಕೇರಿ ಅಯ್ಯಂಗೇರಿ ಗ್ರಾಮದ ಮಿದ್ ಲಾಜ್ (22) ಹಾಗೂ ಈತನ ಪ್ರೇಯಸಿ ಫಾತಿಮಾ(26) ಬಂಧಿತರು.ಅಯ್ಯಂಗೇರಿ ಗ್ರಾಮದ ಜಲೀನಾ ಎಂಬುವರ ಮನೆ ಬಾಗಿಲು ಮೀಟಿ ಕೃತ್ಯವೆಸಗಿದ್ದ ಕಿಲಾಡಿ ಲವರ್ಸ್ ಇದೀಗ ಪೊಲೀಸರ ಅತಿಥಿಗಳು.
ಏಪ್ರಿಲ್ 12 ರಂದು ಜಲೀನಾ ರವರು ತಮ್ಮ ಸಂಭಂಧಿಕರ ಮನೆಗೆ ತೆರಳಿದ್ದರು.ಹಿಂದಿರುಗಿ ಬಂದಾಗ ಮನೆ ಬಾಗಿಲು ಮೀಟಿ 15,08,000/- ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳ್ಳರು ದೋಚಿದ್ದರು.ಈ ಸಂಭಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಡಿಕೇರಿ ಜಿಲ್ಲಾ ಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ಹಾಗೂ ಅಡಿಷನಲ್ ಎಸ್ಪಿ ಸುಂದರರಾಜ್ ಉಸ್ತುವಾರಿಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅರುಣ್.ಎಲ್.ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತಂಡ ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನ ಸೆದೆಬಡಿಯುವಲ್ಲಿ ಯಶಸ್ವಿಯಾಗಿದೆ.
ವೃತ್ತನಿರೀಕ್ಷಕರಾದ ಅರುಣ್.ಎಲ್.ರವರ ತಂಡದಲ್ಲಿ ಎಸ್ಸೈಗಳಾದ ಶೋಭಾ ಲಮಾಣಿ,ನಾಪೋಕ್ಲು ಠಾಣೆಯ ಮಂಜುನಾಥ್ ಎಎಸ್ಸೈ ದಿನೇಶ್ ಹಾಗೂ ಸಿಬ್ಬಂದಿಗಳಾದ ರಾಮಪ್ಪ,ಲೋಕೇಶ್,ಮಧುಸೂಧನ್,ವಸಂತ,ಪ್ರೇಮ್ ಕುಮಾರ್,ಸುನಿಲ್ ಕುಮಾರ್,ಮಹದೇವಸ್ವಾಮಿ,ಪರಮೇಶ್,ನಾಗರಾಜ್ ಕಡಗಣ್ಣನವರ್,ಸಂಗಪ್ಪ,ಚೋಂದಮ್ಮ,ಶ್ರೀಶೈಲ ಬಿರಾದಾರ್,ಉಮೇಶ್,ಫರೀಫ್,ರಾಜೇಶ್,ಪ್ರವೀಣ್ ರವರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಚುನಾವಣೆ ನಿಮಿತ್ತ ಮೈಸೂರಿನಿಂದ ಮಡಿಕೇರಿಗೆ ವರ್ಗಾವಣೆಯಾದ ಅರುಣ್ ಎಲ್ ರವರ ಮಿಂಚಿನ ಕಾರ್ಯಾಚರಣೆಯನ್ನ ಜಿಲ್ಲಾ ಎಸ್ಪಿ ಹಾಗೂ ಹೆಚ್ಚುವರಿ ಅಧೀಕ್ಷಕರು ಶ್ಲಾಘಿಸಿದ್ದಾರೆ…