ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…
- TV10 Kannada Exclusive
- April 18, 2024
- No Comment
- 974
ಮೈಸೂರು,ಏ18,Tv10 ಕನ್ನಡ
ಮೈಸೂರಿನಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ನಕಲಿ ಫೆವಿಕ್ವಿಕ್ ಗಳು ದೊರೆತಿದ್ದು ಏಜೆನ್ಸಿಯ ಮಾಲೀಕನನ್ನ ಬಂಧಿಸಿದ್ದಾರೆ.
ಸಂತೆಪೇಟೆಯಲ್ಲಿರುವ ಮಹೇಶ್ ಎಜೆನ್ಸಿ ಮಾರ್ಕೆಟಿಂಗ್ ಅಂಗಡಿಯಲ್ಲಿ pidilite ಕಂಪನಿ ಯ ನಕಲಿ Fevikwik ಗಳನ್ನ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿಯ ಅಧಿಕೃತ ಪ್ರತಿನಿಧಿ ಯಾದ ಜಿ ಪೂಬಾಲನ್ ಹಾಗೂ ಶೇಕ್ ಖಾಸಿಂ ರವರಿಗೆ ಮಾಹಿತಿ ದೊರೆತಿದ್ದು ಎರಡು ದಿನಗಳ ಹಿಂದೆ ಅಂಗಡಿಯಿಂದ ಫೆವಿಕ್ವಿಕ್ ಖರೀದಿಸಿ ಪರಿಶೀಲನೆ ಮಾಡಿದಾಗ ಅಸಲು ಪ್ಯಾಕಿಂಗ್ ಅನ್ನು ಹೋಲಿಕೆ ಆಗುವಂತೆ ಡ್ಯೂಪ್ಲಿಕೇಟ್ ತಯಾರಿಸಿ ಮಾರಾಟ ಮಾಡುತ್ತಿರುವುದು ಖಚಿತವಾಗಿದೆ. ಈ ಹಿನ್ನಲೆ ಅಧಿಕಾರಿಗಳು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. FIR ದಾಖಲಿಸಿಕೊಂಡ ಪೊಲೀಸರು ಮಹೇಶ್ ಎಜೆನ್ಸಿಯ ಎರಡು ಅಂಗಡಿ ಗಳ ಮೇಲೆ ದಾಳಿ ನಡೆಸಿ ಒಟ್ಟು 1860 Fevikwik ಗಳನ್ನು ವಶಪಡಿಸಿಕೊಂಡು, ಅಂಗಡಿಯ ಮಾಲೀಕ ವರದಾರಾಮ್ ಬಿನ್ ಮೋಡಜಿ ಎಂಬಾತನನ್ನು ವಶಕ್ಕೆ ಪಡೆದು ನಕಲಿ Fevikwik ಬಂದ ಮೂಲದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ದಾಳಿ ಕಾರ್ಯಾಚರಣೆಯಲ್ಲಿ ದೇವರಾಜ ಠಾಣೆಯ ಇನ್ಸ್ ಪೆಕ್ಟರ್ ಟಿ. ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ, Pidilite ಕಂಪನಿಯ ಪ್ರತಿನಿಧಿ ಪೂಬಾಲನ್, ಶೇಕ್ ಖಾಸಿಂ ಹಾಗೂ ಸಿಬ್ಬಂದಿ ಮಂಚನಾಯಕ್, ಶಿವರಾಜು, ಮನೋಹರ್, ಮಂಜುನಾಥ್ ಭಾಗವಹಿಸಿದ್ದರು.
ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಅಪರಾದ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರು ಶ್ಲಾಘಿಸಿದ್ದಾರೆ…