ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…
- TV10 Kannada Exclusive
- April 19, 2024
- No Comment
- 177
ಮೈಸೂರು,ಏ19,Tv10 ಕನ್ನಡ
ಲೋಕಸಭೆ ಚುನಾವಣೆ ಕಾವು ಏರುತ್ತಿದೆ.ಅಭ್ಯರ್ಥಿಗಳು ಮತಬೇಟೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಇಂದು ಅಗ್ರಹಾರ 50 ನೇ ವಾರ್ಡ್ ನಲ್ಲಿ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪಾದ ತೊಳೆದು ಜನ ಸ್ವಾಗತಿಸಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ರನ್ನ ಹಸೆ ಮಣೆಯ ಮೇಲೆ ನಿಲ್ಲಿಸಿ
ಅವರ ಪಾದವನ್ನು ತೊಳೆದು ಮಲ್ಲಿಗೆ ಹೂ ಹಾಕಿ ಮಹಿಳೆಯರು ಆರತಿ ಮಾಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಶುಭಕೋರಿದ್ದಾರೆ.ಜೊತೆಗರ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ,ಮಾಜಿ ಮೇಯರ್ ಶಿವಕುಮಾರ್ ಅವರನ್ನೂ ಸಹ ಸನ್ಮಾನಿಸಿ ಗೌರವಿಸಿದ್ದಾರೆ…