ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ ಮತಯಾಚನೆ…
- TV10 Kannada Exclusive
- April 19, 2024
- No Comment
- 160
ಮೈಸೂರು,ಏ19,Tv10 ಕನ್ನಡ
ಮೈಸೂರಿನ ವಾರ್ಡ್ ನಂ 23 ರ ದೇವರಾಜ ಮಾರುಕಟ್ಟೆ,ಡಿ.ದೇವರಾಜ ಅರಸ್ ರಸ್ತೆ,ಸಯ್ಯಾಜಿರಾವ್ ರಸ್ತೆ,ಕೆ.ಟಿ.ಸ್ಡ್ರೀಟ್,ಶ್ರೀರಾಂಪೇಟೆಯಲ್ಲಿ ಬಿಜೆಪಿ ಮುಖಂಡರು ಯದುವೀರ್ ಪರ ಮತಯಾಚಿಸಿದರು.ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನ ಹಂಚಿ ಯದುವೀರ್ ರನ್ನ ಲೋಕಸಭೆಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಯದುವೀರ್ ಇಬ್ಬರೂ ಇರುವ ಭಿತ್ತಿಚಿತ್ರಗಳನ್ನ ಪ್ರದರ್ಶಿಸಿ ಪ್ರಚಾರ ನಡೆಸಿದರು. ಬಿಜೆಪಿ ಮುಖಂಡರಾದ ಮೈ. ಕಾ. ಪ್ರೇಮ್ ಕುಮಾರ್, ಆರ್ ಪರಮೇಶ , ಸುರೇಂದ್ರ ಕಿರಣ್, ಪ್ರಮೋದ್, ಶ್ರೀಮತಿ ಲಕ್ಷ್ಮಿ, ಸುನಿಲ್ ಪೈ, ಆನಂತರಾಯ ಪೈ, ಕೃಷ್ಣ, ಕುಮಾರ್, ಸಂತೋಷ್, ಇಂದ್ರಕುಮಾರ್ ಹಾಗೂ ಇತರರು ಹಾಜರಿದ್ದರು…