ಮನೆ ತಾರಸಿ ಮೇಲೆ ಪತಿ ಶವ ಪತ್ತೆ…ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಪತ್ನಿ…
- TV10 Kannada Exclusive
- April 21, 2024
- No Comment
- 83
ನಂಜನಗೂಡು,ಏ21,Tv10 ಕನ್ನಡ
ಸಂಭಂಧಿಕರ ಮನೆಯಿಂದ ತನ್ನ ಮನೆಗೆ ಬಂದ ವ್ಯಕ್ತಿ ಶವ ತಾರಸಿ ಮೇಲೆ ಪತ್ತೆಯಾದ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.ನಾಗೇಂದ್ರ(36) ತನ್ನ ಮನೆ ತಾರಸಿ ಮೇಲೆ ಶವವಾಗಿ ಪತ್ತೆಯಾದ ವ್ಯಕ್ತಿ.ಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪತ್ನಿ ಮಂಗಳಾ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಂಬದ ಕೆಲಸ ಮಾಡುವ ನಾಗೇಂದ್ರ ಮನೆ ಬಿಟ್ಟರೆ ತಿಂಗಳುಗಳ ಕಾಲ ಬರುತ್ತಿರಲಿಲ್ಲ.ಎರಡು ದಿನಗಳ ಹಿಂದೆ ಸಂಭಂಧಿಕರ ಮನೆಗೆ ತೆರಳಿ ನಂತರ ತನ್ನ ಮನೆಗೆ ಬಂದಿದ್ದಾನೆ.ಪತಿ ಮನೆಗೆ ಬಂದ ವಿಚಾರ ಪತ್ನಿಯ ಗಮನಕ್ಕೆ ಬಂದಿಲ್ಲ.ತಾರಸಿ ಮೇಲೆ ಬಟ್ಟೆ ಒಣಗಿಹಾಕಲು ತೆರಳಿದ ಪತ್ನಿಗೆ ತನ್ನ ಪತಿಯ ಮೃತದೇಹ ಕಂಡುಬಂದಿದೆ.ಪತಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಮಂಗಳಾ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ…