ಹುಣಸೂರು: ಹುಲಿ ದಾಳಿ…ಹಸು ಬಲಿ…
- TV10 Kannada Exclusive
- April 23, 2024
- No Comment
- 141
ಹುಣಸೂರು,ಏ23,Tv10 ಕನ್ನಡ
ಹುಲಿದಾಳಿಗೆ ಹಸು ಬಲಿಯಾದ ಘಟನೆ ಹುಣಸೂರು ತಾಲೂಕಿನ ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.ಮನೋಹರ್ ಎಂಬುವರಿಗೆ ಸೇರಿದ ಹಸು ಬಲಿಯಾಗಿದೆ.ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಇಲ್ಲವೆಂದು ಕಿಕ್ಕೇರಿಕಟ್ಟೆ ಗ್ರಾಮಸ್ಥರು ಇತ್ತೀಚೆಗಷ್ಟೆ ತಾಲೂಕು ಆಡಳಿತದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದರು.ಇದರ ಬೆನ್ನ ಹಿಂದೆಯೇ ಹುಲಿ ದಾಳಿಗೆ ಹಸು ಬಲಿಯಾಗಿದೆ.ಶೀಘ್ರದಲ್ಲೇ ಆತಂಕ ಸೃಷ್ಟಿಸಿರುವ ವ್ಯಾಘ್ರನನ್ನ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ…