ಮನೆಗೆ ನುಗ್ಗಿ ಮಹಿಳೆ ಅಪಹರಣ…6 ಮಂದಿ ತಂಡದಿಂದ ದುಷ್ಕೃತ್ಯ…ತಂಡದಲ್ಲಿ ಓರ್ವ ಮಹಿಳೆ ಭಾಗಿ…ಮಕ್ಕಳ ಮುಂದೆಯೇ ಕೃತ್ಯ…
- TV10 Kannada Exclusive
- April 23, 2024
- No Comment
- 340
ಮೈಸೂರು,ಏ23,Tv10 ಕನ್ನಡ
ಮಹಿಳೆ ಸೇರಿದಂತೆ 6 ಮಂದಿ ತಂಡವೊಂದು ಮನೆಗೆ ನುಗ್ಗಿ ಗೃಹಿಣಿಯನ್ನ ಬಲವಂತವಾಗಿ ಎಳೆದೊಯ್ದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಎಜೆ ಬ್ಲಾಕ್ ನಲ್ಲಿ ನಡೆದಿದೆ.ಮಗ ಹಾಗೂ ಮಗಳ ಮುಂದೆಯೇ ತಾಯಿಯನ್ನ ದುಷ್ಕರ್ಮಿಗಳ ತಂಡ ಅಪಹರಿಸಿದೆ.ಸವಿತಾ(42) ಅಪಹರಣಕ್ಕೆ ಒಳಗಾದವರು. .ಮಗ ಶಶಾಂಕ್ ಹಾಗೂ ಮಗಳು ಅರುಣ ಕಣ್ಣೆದುರೇ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.ಏ.21 ರಂದು ಘಟನೆ ನಡೆದಿದ್ದು ಎನ್.ಆರ್.ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನ ರಕ್ಷಿಸಿದ್ದಾರೆ.ಏ21 ರ ರಾತ್ರಿ ಏಕಾ ಏಕಿ ಮನೆಗೆ ನುಗ್ಗಿದ 6 ಮಂದಿ ಮನೋಜ್ ನ ಎಲ್ಲಿ ಇರಿಸಿದ್ದೀಯ ಎಂದು ಪ್ರಶ್ನಿಸುತ್ತಾ ಸವಿತಾ ರವರ ಜುಟ್ಟನ್ನ ಹಿಡಿದು ಎಳೆದಾಡಿದ್ದಾರೆ.ಬಿಡಿಸಲು ಬಂದ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದಾರೆ.ನಂತರ ಮಗಳು ಅರಣ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಸಿದಿದ್ದಾರೆ.ಸವಿತಾರನ್ನ ಡಸ್ಟರ್ ಕಾರಿನಲ್ಲಿ ಹಾಕಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾರೆ.ಈ ಸಂಭಂಧ ಶಶಾಂಕ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸರಿತಾರನ್ನ ರಕ್ಷಿಸಿದ್ದು ಘಟನೆಗೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ…