ಪಕ್ಷಿಗಳಿಗೆ ನೀರಿನ ವ್ಯವಸ್ಥೆ…ಕೆಎಂಪಿಕೆ ಟ್ರಸ್ಟ್ ನ ಸಾಮಾಜಿಕ ಕಳಕಳಿ…
- TV10 Kannada Exclusive
- April 27, 2024
- No Comment
- 130
ಮೈಸೂರು,ಏ27,Tv10 ಕನ್ನಡ
ಸುಡು ಬಿಸಿಲು ನಾಗರೀಕರನ್ನ ಹೈರಾಣು ಮಾಡಿದೆ.ಬಿಸಿಲಿನ ತಾಪಕ್ಕೆ ಜನತೆ ಪರದಾಡುತ್ತಿದ್ದಾರೆ.ಪ್ರಾಣಿ ಪಕ್ಷಿಗಳಂತೂ ತತ್ತರಿಸುತ್ತಿವೆ.ಇಂತಹ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಪಕ್ಷಿಗಳ ನೆರವಿಗೆ ಧಾವಿಸಿದೆ.ನಗರದ ವಿವಿದೆಡೆ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.ಕಳೆದ ಎರಡು ತಿಂಗಳಿಂದಲೇ ಪಕ್ಷಿಗಳಿಗಾಗಿ ಬಟ್ಟಲುಗಳಲ್ಲಿ ನೀರು ತುಂಬಿ ಮರಗಳ ಕೊಂಬೆಗಳಿಗೆ ಕಟ್ಟಿ ದಾಹ ತೀರಿಸುವ ಕೆಲಸಕ್ಕೆ ಟ್ರಸ್ಟ್ ಮುಂದಾಗಿದೆ.ಇಂದೂ ಸಹ ಲಕ್ಷ್ಮಿಪುರಂನಲ್ಲಿರುವ ಹಲವು ಮರಗಳಿಗೆ ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ ಬಟ್ಟಲುಗಳನ್ನ ಕಟ್ಟಿ ನೀರುಣಿಸಲು ಮುಂದಾಗಿದ್ದಾರೆ.ಎರಡೂ ಸಂಘಟನೆಗಳ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.ಮೂಕಪ್ರಾಣಿಗಳ ಸಮಸ್ಯೆಗೆ ಸ್ಪಂದಿಸಿದ ಎರಡೂ ಸಂಘಟನೆಗಳ ಕಾರ್ಯವೈಖರಿ ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ
ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಗಿರೀಶ್ ರಾಮ್ ಮೂರ್ತಿ, ಎಸ್ ಎನ್ ರಾಜೇಶ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು, ಚಕ್ರಪಾಣಿ, ಮಹೇಶ್ ಕುಮಾರ್, ಭಂಡಾರಿ, ದಯಾನಂದ್, ಹಾಗೂ ಇನ್ನಿತರರು ಹಾಜರಿದ್ದರು…