ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಬನ್ನೂರು,ಮೇ21,Tv10 ಕನ್ನಡ

ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆಯ ಭೀಕರ ಕೊಲೆಯಾಗಿದೆ. ಪತಿಯಿಂದ ಕೃತ್ಯ ನಡೆದಿದೆ. ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದ
ವಿದ್ಯಾ ಕೊಲೆಯಾದ ಮುಖಂಡೆ.
ಕೌಟುಂಬಿಕ ಕಲಹ ಹಿನ್ನೆಲೆ ಕೊಲೆಯಾಗಿದೆ ಎನ್ನಲಾಗಿದೆ.
ಪತಿ ನಂದೀಶ್ ಹತ್ಯೆಗೈದು ಪರಾರಿಯಾಗಿದ್ದಾನೆ.ವಿದ್ಯಾ ಮೈಸೂರಿನ ಶ್ರೀರಾಂಪುರ ನಿವಾಸಿ ವಿದ್ಯಾ ನಂದೀಶ್ ರನ್ನ ವಿವಾಹವಾಗಿ ಎರಡು ಮಕ್ಕಳ ತಾಯಿ ಆಗಿದ್ದಾರೆ.ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.ಅಲ್ಲದೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.ದಂಪತಿ ನಡುವೆ ಸಾಮರಸ್ಯ ಇರಲಿಲ್ಲವೆಂದು ತಿಳಿದುಬಂದಿದೆ.ಇತ್ತೀಚೆಗೆ ಕಾಂಗ್ರೆಸ್ ನಾಯಕರು ವಿದ್ಯಾಗೆ ಮತ್ತೊಂದು ಗುರುತರ ಜವಾಬ್ದಾರಿ ನೀಡಲು ಮುಂದಾಗಿದ್ದರೆಂದು ತಿಳಿದುಬಂದಿದೆ.ನಿನ್ನೆ ತಡರಾತ್ರಿಯಲ್ಲಿ ವಿದ್ಯಾ ಬನ್ನೂರಿನ ತುರಗನೂರಿನಲ್ಲಿದ್ದ ಪತಿ ಮನೆಗೆ ವಿದ್ಯಾ ತೆರಳಿದ್ದಾರೆ.ದಂಪತಿ ನಡುವೆ
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಈ ವೇಳೆ ಪತ್ನಿ ತಲೆಗೆ ನಂದೀಶ್ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ.ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್,ಅಡಿಷನಲ್ ಎಸ್ಪಿ ನಂದಿನಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹತ್ಯಗೈದ ಪತಿ ನಂದೀಶ್ ಸೆರೆಗೆ
ಬನ್ನೂರು ಪೊಲೀಸರು ಬಲೆ ಬೀಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *