ವಕೀಲರ ಮುಂದೆ ಮಹಿಳೆಗೆ ಹಲ್ಲೆ ನಡೆಸಿ ಬಟ್ಟೆ ಹರಿದು ವಿಡಿಯೋ ಚಿತ್ರೀಕರಿಸಿದ ತಮ್ಮ…ತಡೆಯಲು ಬಂದ ಅಡ್ವೋಕೇಟ್ ಮೇಲೂ ಅಟ್ಯಾಕ್…

ವಕೀಲರ ಮುಂದೆ ಮಹಿಳೆಗೆ ಹಲ್ಲೆ ನಡೆಸಿ ಬಟ್ಟೆ ಹರಿದು ವಿಡಿಯೋ ಚಿತ್ರೀಕರಿಸಿದ ತಮ್ಮ…ತಡೆಯಲು ಬಂದ ಅಡ್ವೋಕೇಟ್ ಮೇಲೂ ಅಟ್ಯಾಕ್…

ಮೈಸೂರು,ಮೇ23,Tv10 ಕನ್ನಡ

ವಕೀಲರ ಮುಂದೆ ಅಕ್ಕನ ಮೇಲೆ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಟ್ಟೆ ಹರಿದ ತಮ್ಮ ವಿಡಿಯೋ ಚಿತ್ರೀಕರಿಸಿ ಅವಾಂತರ ನಡೆಸಿದ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.ಪರಿಸ್ಥಿತಿಯನ್ನ ನಿಯಂತ್ರಿಸಲು ಬಂದ ವಕೀಲರ ಮೇಲೂ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ.ಘಟನೆಗೆ ಸಂಭಂಧಪಟ್ಟಂತೆ ಹಲ್ಲೆಗೊಳಗಾದ ಮಹಿಳೆ ಸಹೋದರನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಚನಾ ಹಾಗೂ ವಕೀಲರಾದ ಶರತ್ ರಾಜ್ ಹಲ್ಲೆಗೊಳಗಾದವರು.ರಚನಾ ರವರ ಸಹೋದರ ರಂಜಿತ್ ಹಲ್ಲೆ ನಡೆಸಿದ ಆರೋಪಿ.

ರಚನಾ ರವರು ತಮ್ಮ ವಕೀಲರಾದ ಶರತ್ ರಾಜ್ ಜೊತೆ ಕಾರಿನಲ್ಲಿ ತಮ್ಮ ಮನೆ ಮುಂದೆ ಬಂದು ಇಳಿಯುತ್ತಿದ್ದಾಗ ಏಕಾಏಕಿ ಬಂದ ರಂಜಿತ್ ಅವಾಚ್ಯ ಶಬ್ದಗಳನ್ನ ಬಳಿಸಿ ಅಕ್ಕನ ಕೂದಲು ಎಳೆದಾಡಿ ಕಾರಿನಿಂದ ಹೊರಕ್ಕೆ ಎಳೆದು ಹಲ್ಲೆ ನಡೆಸಿ ಬಟ್ಟೆ ಹರಿದುಹಾಕಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ.ಈ ವೇಳೆ ಬಿಡಿಸಲು ಬಂದ ವಕೀಲ ಶರತ್ ರಾಜ್ ಮೇಲೂ ಸಹ ರಂಜಿತ್ ಹಲ್ಲೆ ನಡೆಸಿದ್ದಾನೆ.ಅಕ್ಕಪಕ್ಕದ ಜನ ರಚನಾ ನೆರವಿಗೆ ಬಂದಿದ್ದಾರೆ.ಅಲ್ಲದೆ ಈ ಘಟನೆ ಎದುರು ಮನೆಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರಬಹುದೆಂದು ರಚನಾ ತಿಳಿಸಿದ್ದು ತನ್ನ ತಮ್ಮ ರಂಜಿತ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *