ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ,ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಕಿರುಕುಳ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ,ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಕಿರುಕುಳ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ಮೇ22,Tv10 ಕನ್ನಡ

ಮಹಿಳೆಯೊಬ್ಬರ ವೈಯುಕ್ತಿಕ ಫೋಟೋ,ವಿಡಿಯೋ ಹಾಗೂ ಆಡಿಯೋಗಳನ್ನ ಇನ್ಸ್ಟಾಗ್ರಾಂ ನಲ್ಲಿ ಐಡಿ ಕ್ರಿಯೇಟ್ ಮಾಡಿ ಅಪ್ ಲೋಡ್ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುವ ಘಟನೆ ಮೈಸೂರಿನ ಬನ್ನಿಮಂಟಪದ ಅಲೀಂನಗರದಲ್ಲಿ ನಡೆದಿದೆ.ನೊಂದ ಮಹಿಳೆ ಆರೋಪಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೊಂದ ಮಹಿಳೆ ನಾಯ್ಡುನಗರದ ಮಹಮದ್ ಫೈಜಾನ್ ಎಂಬಾತನ ಜೊತೆ ಎರಡು ವರ್ಷಗಳ ಕಾಲ ರಿಲೇಷನ್ ಷಿಪ್ ಇಟ್ಟುಕೊಂಡಿದ್ದರು.ಆತನ ವರ್ತನೆ ಸರಿ ಇಲ್ಲದ ಕಾರಣ ಬ್ರೇಕ್ ಅಪ್ ಕೂಡ ಆಗಿತ್ತು.ನಂತರ ಮಹಿಳೆ ತಮ್ಮ ಕಸೀನ್ ಜೊತೆ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಈ ವೇಳೆ ಇನ್ಸ್ಟಾಗ್ರಾಂ ನಲ್ಲಿ ಖಾತೆ ತೆರೆದ ವ್ಯಕ್ತಿಯೊಬ್ಬ ಮಹಿಳೆಯ ವೈಯುಕ್ತಿಕ ಫೋಟೋಗಳನ್ನ ಅಪ್ ಲೋಡ್ ಮಾಡಿದ್ದಾರೆ.ನಂತರ ಮತ್ತೊಂದು ಖಾತೆ ತೆರೆದು ಮಹಿಳೆಯ ಗಂಡ ಹಾಗೂ ಎಕ್ಸ್ ಬಾಯ್ ಫ್ರೆಂಡ್ ಫೋಟೊಗಳನ್ನ ಅಪ್ ಲೋಡ್ ಮಾಡಿದ್ದಾರೆ.ಈ ಬೆಳವಣಿಗೆಯಿಂದ ಪತಿ ಮಹಿಳೆಗೆ ವಿಚ್ಛೇದನ ನೀಡಿದ್ದಾರೆ.ಇದಾದ ನಂತರ ತನ್ನ ಎಕ್ಸ್ ಬಾಯ್ ಫ್ರೆಂಡ್ ಫೋಟೋಗಳನ್ನ ಅಪ್ ಲೋಡ್ ಮಾಡಿರುವುದನ್ನ ಮಹಿಳೆ ಖಚಿತಪಡಿಸಿಕೊಂಡಿದ್ದಾರೆ.ಈ ವಿಚಾರ ತಿಳಿದ ನಂತರ ಬಾಯ್ ಫ್ರೆಂಡ್ ತನನ್ನ ಮದುವೆ ಆಗುವಂತೆ ಒತ್ತಾಯಿಸಿ ಧಂಕಿ ಹಾಕಿದ್ದಾನೆ.ಇಲ್ಲದಿದ್ದಲ್ಲಿ ಬೆತ್ತಲೆ ಫೋಟೋಗಳನ್ನ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ.ಇದರಿಂದ ಹೆದರಿದ ಮಹಿಳೆ ಸಂಪರ್ಕ ಕಡಿದುಕೊಂಡಿದ್ದಾರೆ.ಈ ಸಂಧರ್ಭದಲ್ಲಿ ಮತ್ತೊಂದು ಹೆಸರಲ್ಲಿ ಐಡಿ ಕ್ರಿಯೇಟ್ ಆಗಿ ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ ಹಾಗೂ ಆಡಿಯೊ ಅಪ್ ಲೋಡ್ ಮಾಡಲಾಗಿದೆ.ಇದು ಸಂಭಂಧಿಕರು,ಕುಟುಂಬಸ್ಥರು,ಸ್ನೇಹಿತರು ಹಾಗೂ ನೆರೆಹೊರೆಯವರಿಗೆ ಸೆಂಡ್ ಮಾಡಿ ಮಹಿಳೆಗೆ ಮಾನಸಿಕ ಕಿರುಕುಳ ನೀಡಲಾಗಿದೆ.ನೊಂದ ಮಹಿಳೆ ತನ್ನ ಎಕ್ಸ್ ಬಾಯ್ ಫ್ರೆಂಡ್ ವಿರುದ್ದ ಪ್ರಕರಣ ದಾಖಲಿಸಿ ವಿಡಿಯೋ ಫೋಟೋಗಳನ್ನ ಅಪ್ ಲೋಡ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *