ಇಂದಿನಿಂದ ಶಾಲೆ ಆರಂಭ…ಮಕ್ಕಳಿಗೆ ವಿಶೇಷ ಸ್ವಾಗತ…ಶುಭಹಾರೈಸಿದ ಹಿರಿಯರು…

ಇಂದಿನಿಂದ ಶಾಲೆ ಆರಂಭ…ಮಕ್ಕಳಿಗೆ ವಿಶೇಷ ಸ್ವಾಗತ…ಶುಭಹಾರೈಸಿದ ಹಿರಿಯರು…

ಮೈಸೂರು,ಮೇ31,Tv10 ಕನ್ನಡ

ಇಂದಿನಿಂದ 2024-25 ನೇ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿದೆ.ರಜೆ ಮುಗಿಸಿ ಮುಂದಿನ ತರಗತಿಗಳಿಗೆ ತೆರಳುತ್ತಿರುವ ವಿಧ್ಯಾರ್ಥಿಗಳು ಹೊಸ ಹುರುಪಿನಿಂದ ಸಮವಸ್ತ್ರಗಳನ್ನ ಧರಿಸಿ ಶಾಲೆಗಳಿಗೆ ತೆರಳಿದ್ದಾರೆ.ರಜೆಯಲ್ಲಿ ಆಟಗಳಲ್ಲಿ ತೊಡಗಿ ಮತ್ತೆ ಓದಿನತ್ತ ಗಮನಹರಿಸುವ ವಿಧ್ಯಾರ್ಥಿಗಳು ಇಂದು ತಮ್ಮ ಶಾಲೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.ಹೊಸ ಚೈತನ್ಯ ತುಂಬಿಕೊಂಡು ಶಾಲೆಗಳಿಗೆ ಬಂದ ವಿಧ್ಯಾರ್ಥಿಗಳಿಗೆ ಗುಲಾಬಿ ಹೂವು, ಮೈಸೂರ್ ಪಾಕ್, ಪುಸ್ತಕ ಪೆನ್ನು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಗಿದೆ.
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆಯ ಸದಸ್ಯರಗಳು ಮಕ್ಕಳನ್ನ ವಿಶೇಷವಾಗಿ ಸ್ವಾಗತಿಸಿ ಶುಭ ಹಾರೈಸಿದ್ದಾರೆ.ಈ ಸಂಭ್ರಮದ ಕ್ಷಣಕ್ಕಾಗಿ ಶಾಲೆಯ ಶಿಕ್ಷಕರ ಜೊತೆಗೂಡಿ ಶಾಲೆಯನ್ನು ಮಾವಿನ ಸೊಪ್ಪಿನ ತಳಿರು ತೋರಣದಲ್ಲಿ ಅಲಂಕರಿಸಿ ಮಕ್ಕಳಿಗೆ ಆರತಿ ಬೆಳಗಿ , ಹೂವಿನ ಮೇಲೆ ನಡೆಸಿಕೊಂಡು , ಗುಲಾಬಿ ಹೂ ಹಾಗೂ ಮೈಸೂರು ಪಾಕ್ ಮತ್ತು ಪುಸ್ತಕ ಪೆನ್ನು ನೀಡಿ ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಸುಚಿಂದ್ರ, ಯದುನಂದನ್, ಆದರ್ಶ್, ನಾಳೆಯ ಮುಖ್ಯೋಪಾಧ್ಯಾಯರಾದ ಸುಗುಣ, ಶಿಕ್ಷಕರಾದ ಶಿವಯ್ಯ, ನಾಗರತ್ನ, ಶಿಲ್ಪ, ಸಿಬ್ಬಂದಿ ಮಮತಾ ಹಾಗೂ ಇನ್ನಿತರರು ಮಕ್ಕಳಿಗೆ ಶುಭಹಾರೈಸಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *