ಜಿಲ್ಲಾಡಳಿತ ಕಾರ್ಯಾಚರಣೆ…ಕೋಟ್ಯಾಂತರ ಮೌಲ್ಯದ ಜಮೀನು ಸರ್ಕಾರದ ವಶಕ್ಕೆ…ಭೂಗಳ್ಳರಿಗೆ ಶಾಕ್…
- Mysore
- June 22, 2024
- No Comment
- 857
ಮೈಸೂರು,ಜೂ22,Tv10 ಕನ್ನಡ
ಜಿಲ್ಲಾಡಳಿತ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸುಮಾರು 15 ಕೋಟಿ ಬೆಲೆಬಾಳುವ ಜಮೀನು ಭೂಗಳ್ಳರಿಂದ ರಕ್ಷಿಸಲಾಗಿದೆ.ಒತ್ತುವರಿ ಮಾಡಿಕೊಂಡು ದಾಖಲೆಯನ್ನ ಪರಿಶೀಲಿಸಿದ ಜಿಲ್ಲಾಡಳಿತ ಭೂಗಳ್ಳರಿಗೆ ಶಾಕ್ ನೀಡಿದೆ.ಒತ್ತುವರಿ ಮಾಡಿಕೊಂಡಿದ್ದ 10.28 ಎಕ್ರೆ ಜಮೀನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆ ವರುಣಾ ಹೋಬಳಿ ಹಾರೋಹಳ್ಳಿ ಗ್ರಾಮ ಸರ್ವೆ ನಂ.274 ರಲ್ಲಿರುವ 10.28 ಎಕ್ರೆ ಜಮೀನು ಹುಲ್ಲುಬನ್ನಿಯಾಗಿದೆ.ಸದರಿ ಜಮೀನನ್ನ ಕರಿಗೌಡ,ನಾರಾಯಣಗೌಡ,ಚಿಕ್ಕಲಿಂಗಯ್ಯ,ತಿಮ್ಮೇಗೌಡ ಎಂಬುವರು ಒತ್ತುವರಿ ಮಾಡಿಕೊಂಡಿದ್ದರು. ಭೂಗಳ್ಳರಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರ ನಿರ್ದೇಶನದ ಮೇರೆಗೆ ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿಗಳಾದ ಕೆ.ಆರ್.ರಕ್ಷಿತ್ ರವರು ಒತ್ತುವರಿ ಆಗಿರುವ ಜಮೀನು ತೆರವುಗೊಳಿಸಿ ರಕ್ಷಿಸುವಂತೆ ತಹಸೀಲ್ದಾರ್ ರವರಿಗೆ ಆದೇಶಿಸಿದ್ದಾರೆ.
ಇದರಂತೆ ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತಾಲೂಕು ಸೂಪರ್ ವೈಸರ್ ಪ್ರವೀಣ್,ತಾಲೂಕು ಭೂಮಾಪಕರಾದ ವೆಂಕಟೇಶ್,ಮಹದೇವಸ್ವಾಮಿ,ಮಹದೇವಸ್ವಾಮಿ
ಎಂ.ಉಪತಹಸೀಲ್ದಾರ್ ಲತಾ.ಜೆ.ಶರಣಮ್ಮ,ರಾಜಸ್ವ ನಿರೀಕ್ಷಕರಾದ ಡಿ.ಎಸ್.ಶಂಕರ್,ಗ್ರಾಮ ಆಡಳಿತಾಧಿಕಾರಿಗಳಾದ ಅಬ್ದುಲ್ ರಶೀದ್,ಚಂದ್ರಮೌಳೇಶ್ವರ,ಮುಖೇಶ್,ಮಾರುತಿ ನಾಯಕ್,ಹೇಮಂತ್ ಕುಮಾರ್,ನಾಡಕಚೇರಿ ಗುಮಾಸ್ತ ಮಂಜು,ವರುಣಾ ಠಾಣೆ ಪಿಎಸ್ಸೈ ಚೇತನ್
ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿ ಒತ್ತಯವರಿಯನ್ನ ತೆರವುಗೊಳಿಸಿದ್ದಾರೆ…