ಸಿಎಂ ಕಾನ್ ವಾಯ್ ಗೆ ಬೈಕ್ ಸವಾರನಿಂದ ಅಡಚಣೆ…ಸಿಎಂ ಸುಗಮ ಸಂಚಾರಕ್ಕೆ ಅಡ್ಡಿ…ಬೈಕ್ ಸವಾರನ ವಿರುದ್ದ FIR ದಾಖಲು…
- Mysore
- June 26, 2024
- No Comment
- 50
ಮೈಸೂರು,ಜೂ25,Tv10 ಕನ್ನಡ
ಮುಖ್ಯಮಂತ್ರಿಗಳ ಕಾನ್ ವಾಯ್ ಸಾಗಲು ಅಡಚಣೆ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೈಕ್ ಸವಾರನ ವಿರುದ್ದ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವರುಣ ಗ್ರಾಮದ ಕುಂಬ್ರಳ್ಳಿ ನಿವಾಸಿ ಶಿವು(30) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಜೂನ್ 23 ರಂದು ಮುಖ್ಯಮಂತ್ರಿಗಳ ಕಾನ್ ವಾಯ್ ಏರ್ ಪೋರ್ಟ್ ನಿಂದ ನಜರಬಾದ್ ನಲ್ಲಿರುವ ರಿಫ್ರೆಷ್ ಮೆಂಟ್ ಕಡೆಗೆ ಸಾಗುತ್ತಿತ್ತು.
ಕಾನ್ ವಾಯ್ ಸಾಗುವ ಹಾದಿಯಾದ ಮೈಸೂರು ನಂಜನಗೂಡು ಹೆದ್ದಾರಿಯ ರಾಜಹಂಸ ಜಂಕ್ಷನ್ ಬಳಿ ಬ್ಯಾರಿಕೇಡ್ ಗಳನ್ನ ಅಳವಡಿಸಿ ಗನ್ ಹೌಸ್ ರಸ್ತೆಯಿಂದ ಬರುವ ವಾಹನಗಳನ್ನ ನಿಯಂತ್ರಿಸುವ ಕರ್ತವ್ಯದಲ್ಲಿ ಸಂಚಾರಿ ಸಿಬ್ಬಂದಿಗಳಾದ ಅಣ್ಣಯ್ಯ ಹಾಗೂ ಉಪೇಂದ್ರ ರವರು ನಿರತರಾಗಿದ್ದರು.ಈ ವೇಳೆ ಶಿವು ತನ್ನ ಯಮಹಾ ಬೈಕ್ ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ.ಇದನ್ನ ಗಮನಿಸಿದ ಅಣ್ಣಯ್ಯ ಹಾಗೂ ಉಪೇಂದ್ರ ರವರು ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದರು.ಆದರೆ ಇದ್ಯಾವುದನ್ನೂ ಲೆಕ್ಕಿಸದ ಶಿವು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಉಪೇಂದ್ರ ರವರಿಗೆ ಢಿಕ್ಕಿ ಹೊಡೆದು ನಂತರ ಬ್ಯಾರಿಕೇಡ್ ಗಳನ್ನ ಭೇಧಿಸಿ ಸಿಎಂ ಕಾನ್ ವಾಯ್ ಬರುತ್ತಿದ್ದ ವಿರುದ್ದ ದಿಕ್ಕಿನಲ್ಲಿ ಅತಿವೇಗವಾಗಿ ಚಲಿಸಿ ನಂತರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ.ಇದರಿಂದಾಗಿ ಸಿಎಂ ಕಾನ್ ವಾಯ್ ಸುಗಮವಾಗಿ ಸಾಗಲು ಕೆಲಕಾಲ ಅಡಚಣೆಯಾಗಿದೆ.ಬೈಕ್ ನಿಂದ ಬಿದ್ದು ಗಾಯಗೊಂಡ ಶಿವುನನ್ನು ಕಾನ್ ವಾಯ್ ಜೊತೆ ಬರುತ್ತಿದ್ದ ಅಂಬ್ಯುಲೆನ್ಸ್ ಮೂಲಕ ಗೋಪಾಲಗೌಡ ಆಸ್ಪತ್ರೆಗೆ ಸಾಗಿಸಲಾಗಿದೆ.ಸಿಎಂ ಕಾನ್ ವಾಯ್ ಗೆ ಅಡ್ಡಿಪಡಿಸಿ ಕರ್ತವ್ಯ ನಿರತ ಪೊಲೀಸ್ ಗೆ ಢಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ಶಿವು ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೇದೆ ಅಣ್ಣಯ್ಯ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…