- TV10 Kannada Exclusive
- June 27, 2024
- No Comment
- 84
ಕೆ.ಆರ್.ಸಾಗರ ಹಿನ್ನೀರಿನ ನದಿ ಪಾತ್ರಕ್ಕೆ ಅಕ್ರಮ ತಡೆಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತ…ಒತ್ತುವರಿದಾರನಿಗೆ ಖಡಕ್ ವಾರ್ನಿಂಗ್…
ಕೆ.ಆರ್.ಎಸ್,ಜೂ27,Tv10 ಕನ್ನಡ
ಕೆ.ಆರ್.ಎಸ್ ಅಣೆಕಟ್ಟೆಯ ಉತ್ತರ ಭಾಗದ ಸಮೀಪದಲ್ಲಿ ನದಿ ಪಾತ್ರದಲ್ಲಿ ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಅಕ್ರಮವಾಗಿ ಹಿನ್ನೀರಿಗೆ ತಡೆಗೋಡೆ ನಿರ್ಮಿಸುತ್ತಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ತಡೆಗೋಡೆ ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದಾರೆ.Tv10 ಕನ್ನಡ ವಾಹಿನಿ ವರದಿಯ ಫಲಶೃತಿ ಇದಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟೆ ಯ ಉತ್ತರ ಭಾಗದಲ್ಲಿನ ಸರ್ವೆ ನಂ 220 ರ ಮಾಲೀಕ ಮ್ಯಾಥ್ಯು ತನ್ನ ಜಮೀನಿಗೆ ಸೇರಿದಂತೆ ಇರುವ ಕೆ.ಆರ್.ಸಾಗರ ಹಿನ್ನೀರಿನ ಪಾತ್ರ ತನಗೆ ಸೇರಿದೆ ಎಂದು ಸುಮಾರು 30 ಅಡಿ ಉದ್ದ 100 ಅಡಿ ಅಗಲದಷ್ಟು ಹಿನ್ನೀರಿನ ಪಾತ್ರವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗುಂಡಿ ತೋಡಿ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸುತ್ತಿದ್ದರು. ಈ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಕೀಶೋರ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಹಿನ್ನೀರಿನಲ್ಲಿ ಯಾವುದೇ ಕಾಮಗಾರಿ ಮಾಡದಂತೆ ಮ್ಯಾಥ್ಯೂ ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜಂಟಿ ಸರ್ವೇ ಕಾರ್ಯ ನಡೆಸುವ ಮುನ್ನ ಕಾನೂನು ಮೀರಿ ಕಾಮಗಾರಿ ಕೈಗೊಂಡರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ…