- TV10 Kannada Exclusive
- June 26, 2024
- No Comment
- 387
ಕೆ.ಆರ್.ಸಾಗರ ಹಿನ್ನೀರಿನ ನದಿ ಪಾತ್ರಕ್ಕೆ ಅಕ್ರಮ ತಡೆಗೋಡೆ ನಿರ್ಮಾಣ…ಕಾಮಗಾರಿಗೆ ಬ್ರೇಕ್…
ಕೆ.ಆರ್.ಎಸ್,ಜೂ26,Tv10 ಕನ್ನಡ
ಕೆ.ಆರ್.ಎಸ್ ಅಣೆಕಟ್ಟೆಯ ಉತ್ತರ ಭಾಗದ ಸಮೀಪದಲ್ಲಿ ನದಿ ಪಾತ್ರಕ್ಕೆ ಖನ್ನ ಹಾಕುತ್ತಿರುವ ವ್ಯಕ್ತಿಗಳಿಗೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.ಅಕ್ರಮವಾಗಿ ಹಿನ್ನೀರಿಗೆ ತಡೆಗೋಡೆ ಕಟ್ಟುವ ಮೂಲಕ ನೀರಿನ ಸಂಗ್ರಹಣೆಗೆ ಅಡ್ಡಿಪಡಿಸುತ್ತಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ತಡೆಗೋಡೆ ಕಾಮಗಾರಿಯನ್ನ ಸ್ಥಗಿತಗೊಳಿಸಿ ವಾರ್ನಿಂಗ್ ಕೊಟ್ಟಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟೆ ಯ ಉತ್ತರ ಭಾಗದಲ್ಲಿನ ಸರ್ವೆ ನಂ ೨೨೦ ರ ಮಾಲೀಕ ಮ್ಯಾಥ್ಯು ತನ್ನ ಜಮೀನಿಗೆ ಸೇರಿದಂತೆ ಇರುವ ಕೆ.ಆರ್.ಸಾಗರ ಹಿನ್ನೀರಿನ ಪಾತ್ರ ತನಗೆ ಸೇರಿದೆ ಎಂದು ಸುಮಾರು 30 ಅಡಿ ಉದ್ದ 100 ಅಡಿ ಅಗಲದಷ್ಟು ಹಿನ್ನೀರಿನ ಪಾತ್ರವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗುಂಡಿ ತೋಡಿ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಕೀಶೋರ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಹಿನ್ನೀರಿನಲ್ಲಿ ಯಾವುದೇ ಕಾಮಗಾರಿ ಮಾಡದಂತೆ ಮ್ಯಾಥ್ಯೂ ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನೀರಾವರಿ ಇಲಾಖೆ ಮಾಹಿತಿ ನೀಡದೆ ಏಕ ಪಕ್ಷಿಯವಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ಜಂಟಿ ಸರ್ವೇ ಕಾರ್ಯ ನಡೆಸುವ ಮುನ್ನ ಕಾನೂನು ಮೀರಿ ಕಾಮಗಾರಿ ಕೈಗೊಂಡರೆ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸುಮಾರು ೩೨೬ ಕಿ.ಮೀ ವಿಸ್ತೀರ್ಣ ಕೆ.ಆರ್.ಸಾಗರ ಅಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಹಲವಾರು ಸ್ಥಳಗಳಲ್ಲಿ ಸಾಮನ್ಯರಿಂದ ಹಿಡಿದು ಗಣ್ಯವ್ಯಕ್ತಿಗಳೂ ಕೂಡ ಒತ್ತವರಿ ಮಾಡಿಕೊಂಡಿರುವುದು ಇಲಾಖೆ ಗಮನಕ್ಕೆ ಬಂದಿಧ.ಇದರ ಕುರಿತು ಕ್ರಮ ಜರುಗಿಸಲು ಹೋದ ಅಧಿಕಾರಿಗಳಿಗೆ ರಾಜಕೀಯ ಪ್ರಭಾವ ಬೀರಿ ಕ್ರಮ ಜರುಗಿಸದಂತೆ ನಡೆದಿರುವ ಕಾರಣ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಅಧಿಕಾರಿಗಳ ಮಾಹಿತಿ ಯಂತೆ ಸುಮಾರು 8 ರಿಂದ 10 ಕಿ.ಮೀ ನಷ್ಟು ಹಿನ್ನಿರಿನ ಪ್ರದೇಶ ಒತ್ತುವರಿಯಾಗಿದೆ. ಇದರಿಂದ ಸುಮಾರು ೩ ಟಿ.ಎಂ.ಸಿ ನೀರಿನ ಸಂಗ್ರಹ ಕಡಿಮಾಗಲಿದೆ.
ಕೇವಲ ಅಣೆಕಟ್ಟೆ ಪುರ್ನಶ್ಚೇತನ ಕಾಮಗಾರಿಗೆ ಮಾತ್ರ ಆಧ್ಯತೆ ನೀಡಿರುವ ಜಲಸಂನ್ಮೂಲ ಇಲಾಖೆ, ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮ ಒತ್ತುವರಿ ತೆರವಿನ ಬಗ್ಗೆ ನಿರ್ಲಕ್ಷ ಏಕೆ ಎಂಬುದು ಯಕ್ಷಪ್ರಶ್ನೇಯಾಗಿದೆ. ಅಣೆಕಟ್ಟೆ ನೀರು ಪೂರ್ಣ ತುಂಬಿದಾಗ ಜಾಗ ಗುರಿತಿಸ ಬೇಕಾಗಿದ್ದು, ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಹಾಕಿದ ಬೃಹತ್ ಗುರುತು ಕಲ್ಲುಗಳು ಹಲವು ಕಡೆ ಈಗಲು ಇದ್ದು, ಈಗ ಹೊಸದಾಗಿ ಕಲ್ಲುಗಳನ್ನು ಹಾಕಿ ಒತ್ತುವರಿ ತೆರವು ಮಾಡಿ ಹಿನ್ನೀರಿನ ಪ್ರದೇಶವನ್ನು ಒತ್ತವರಿ ಮಾಡದಂತೆ ಕ್ರಮ ಕೈಗೊಳ್ಳಬೇಕಿದೆ.
ಕೆ.ರಘುರಾಮ್, ಅಧೀಕ್ಷಕ ಅಭಿಯಂತರ, ಕಾವೇರಿ ನೀರಾವರಿ ನಿಗಮ , ಮಂಡ್ಯ ವೃತ್ತ : ಕೃಷ್ಣರಾಜಸಾಗರ ಅಣೆಕಟ್ಟೆಯ ಉತ್ತರ ಭಾಗದಲ್ಲಿ ಖಾಸಗಿ ವ್ಯಕ್ತಿ ಒತ್ತವರಿಮಾಡಿರುವ ಜಾಗಕ್ಕೆ ಕಾರ್ಯಪಾಲಕ ಅಭಿಯಂತರ ಭೇಟಿ ನೀಡಿ ಕಾಮಗಾರಿ ಸ್ಥಗಿತಿಗೊಳಿಸಿದ್ದಾರೆ. ಸರ್ವೇ ಇಲಾಖೆಯವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಿ ವರದಿ ನೀಡುವ ವರೆಗೂ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಲಾಗಿದೆ…