ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ನಂಜನಗೂಡು,ಜು21,Tv10 ಕನ್ನಡಕಪಿಲೆಯ ಪ್ರವಾಹಕ್ಕೆ ತತ್ತರಿಸಿರುವ ನಂಜನಗೂಡು ಜನರ ಸಂಕಷ್ಟಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಸ್ಪಂದಿಸಿದ್ದಾರೆ.ಆದ್ರೆ ಸಂಸದ ಸುನಿಲ್ ಬೋಸ್ ರವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಸುನಿಲ್ ಬೋಸ್ ರವರ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನಲೆ ಕಪಿಲೆಯ ನದಿ ಪಾತ್ರದಲ್ಲಿರು ಜನ ತತ್ತರಿಸಿದ್ದಾರೆ.ತಗ್ಗು ಪ್ರದೇಶಗಳಿಗೆ ನುಗ್ಗಿ ನೀರು ಆಸ್ತಿಪಾಸ್ತಿಗಳನ್ನ ಅಪೋಷನ ತೆಗೆದುಕೊಂಡಿದೆ.ಮನೆ ಮಠಗಳಿಂದ ಹೊರಗುಳಿದ ಜನನಿರಾಶ್ರಿತರಾಗಿ ಗಂಜಿ ಕೇಂದ್ರ ಆಶ್ರಯ ಪಡೆದಿದ್ದಾರೆ.ಜನರ ಸಂಕಷ್ಟಗಳಿಗೆ ತಾಲೂಕು ಅಧಿಕಾರಿಗಳು ಸ್ಪಂದಿಸಿ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆಗಳಾಗಿ ಜನ ಬವಣೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಇತ್ತ ಸುಳಿದಿರಲಿಲ್ಲ.ಈ ವಿಚಾರವಾಗಿ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಮಾಡಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು.ಎಚ್ಚೆತ್ತ ಶಾಸಕ ದರ್ಶನ್ ಧೃವನಾರಾಯಣ್ ಫೀಲ್ಡ್ ಗೆಇಳಿದಿದ್ದಾರೆ.ನಾಲ್ಕೈದು ದಿನಗಳ ನಂತರ ಅನಾಹುತ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.Tv10 ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತು ಸ್ಪಂದಿಸಿದ್ದಾರೆ.ಮತ್ತೊಂದೆಡೆ ಸಂಸದ ಸುನಿಲ್ ಭೋಸ್ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುವಲ್ಲಿ ಎಡವಿದ್ದಾರೆ.ಜನರ ಬಳಿಗೆ ಬಾರದೆ ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಚುನಾವಣೆ ವೇಳೆ ಮತಬೇಟೆಗಾಗಿ ಅನಾಹುತಗಳು ನಡೆದ ಪ್ರದೇಶಗಳಿಗೆ ಆಗಾಗ ಭೇಟಿ ನೀಡಿದ್ದ ಸುನಿಲ್ ಬೋಸ್ ಇದೀಗ ಜನರು ಸಂಕಷ್ಟದಲ್ಲಿರುವಾಗ ಸೂಕ್ತವಾಗಿ ಸ್ಪಂದಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.ಸುನಿಲ್ ಬೋಸ್ ರವರ ಈ ನಡೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಲಿ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *