ಸಾಲಗಾರರ ಟಾರ್ಚರ್…ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಸಾಲಗಾರರ ಟಾರ್ಚರ್…ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ…ಕುಟುಂಬಸ್ಥರಲ್ಲಿ ಆತಂಕ…

  • Crime
  • July 23, 2024
  • No Comment
  • 695

ಹುಣಸೂರು,ಜು23,Tv10 ಕನ್ನಡಸಾಲಗಾರರ ಕಿರುಕುಳಕ್ಕೆ ಹೆದರಿ ಆಟೋ ಡ್ರೈವರ್ ಡೆತ್ ನೋಟ್ ಬರೆದು ನಾಪತ್ತೆಯಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟುವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ನಾಲ್ಕು ದಿನಗಳ ಹಿಂದೆ ಡೆತ್ ನೋಟ್ ಬರೆದು ನಾಪತ್ತೆಯಾದ ಆಟೋ ಡ್ರೈವರ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ.ಪ್ರಕರಣದಿಂದ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು ಬಿಳಿಕೆರೆ ಪೊಲೀಸರ ಮೊರೆ ಹೋಗಿದ್ದಾರೆ.ಆಟೋ ಡ್ರೈವರ್ ಆಗಿರುವ ಪ್ರಸಾದ್(37) ಡೆತ್ ನೋಟ್ ಬರೆದು ನಾಪತ್ತೆಯಾದವರು.ನನ್ನ ಸಾವಿಗೆ ಫೈನಾನ್ಸ್ ಮಧು,ಟೆಂಪೋ ಕಿರಣ್ ಕಾರಣ ಎಂದು ಅವರ ಮೊಬೈಲ್ ನಂಬರ್ ನಮೂದಿಸಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದಾರೆ.ಜುಲೈ 20 ರಂದು ಪತ್ನಿ ಲಕ್ಷ್ಮಿಗೆ ಗದ್ದುಗೆಗೆ ಹೋಗಿ ಬರುವುದಾಗಿ ತಿಳಿಸಿ ಪ್ರಸಾದ್ ಮನೆ ಬಿಟ್ಟಿದ್ದಾರೆ.ಎರಡು ದಿನವಾದರೂ ಪ್ರಸಾದ್ ಮನೆಗೆ ಬಂದಿಲ್ಲ.ಅವರ ನಂಬರ್ ಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಬಂದಿದೆ.ಮನೆ ಮುಂದೆ ನಿಂತಿದ್ದ ಆಟೋ ಪರಿಶೀಲಿಸಿದಾಗ ಡೆತ್ ನೋಟ್ ಹಾಗೂ ಮೊಬೈಲ್ ದೊರೆತಿದೆ.ಕೂಡಲೇ ಪತ್ನಿ ಲಕ್ಷ್ಮಿ ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಪತ್ನಿ ಲಕ್ಷ್ಮಿ ಪ್ರಕಾರ ಪ್ರಸಾದ್ 4 ರಿಂದ 5 ಲಕ್ಷ ಸಾಲ ಇದೆ.ಆದ್ರೆ ಟೆಂಪೋ ಕಿರಣ್ ಎಂಬಾತ ಆಗಾಗ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಲಕ್ಷ್ಮಿ ಆರೋಪಿಸಿದ್ದಾರೆ.ಫೈನಾನ್ಸ್ ನಡೆಸುತ್ತಿರುವ ಮಧು ಬಳಿ ಪ್ರಸಾದ್ ಗೆ ಕಿರಣ್ ಜಾಮೀನಾಗಿ ಸಾಲ ಕೊಡಿಸಿದ್ದ ಎಂದು ಹೇಳಲಾಗಿದೆ.ಹೀಗಾಗಿ ಕಿರಣ್ ಆಗಾಗ ಮನೆಗೆ ಬಂದು ಸಾಲ ಹಿಂದಿರುಗಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಲಕ್ಷ್ಮಿ ಆರೋಪಿಸಿದ್ದಾರೆ.ನಾಲ್ಕು ದಿನಗಳಾದ್ರೂ ಪ್ರಸಾದ್ ಮನೆಗೆ ವಾಪಸ್ ಬಾರದ ಕಾರಣ ಕುಟುಂಬಸ್ಥರು ಆತಂಕ್ಕೆ ಸಿಲುಕಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *