ಮೃತಪಟ್ಟ ವ್ಯಕ್ತಿ ಖಾತೆಗೆ 3 ವರ್ಷಗಳ ನಂತರ ಅನುದಾನ ಬಿಡುಗಡೆ ಪ್ರಕರಣ…ಪಿಡಿಓ ಎಡವಟ್ಟು ಸಾಬೀತು…ಸಮಿತಿಯಿಂದ ವರದಿ ಸಲ್ಲಿಕೆ…Tv10 ಕನ್ನಡ ವರದಿ ಇಂಪ್ಯಾಕ್ಟ್…
- CrimeMysore
- July 23, 2024
- No Comment
- 332
ಮೃತಪಟ್ಟ ವ್ಯಕ್ತಿ ಖಾತೆಗೆ 3 ವರ್ಷಗಳ ನಂತರ ಅನುದಾನ ಬಿಡುಗಡೆ ಪ್ರಕರಣ…ಪಿಡಿಓ ಎಡವಟ್ಟು ಸಾಬೀತು…ಸಮಿತಿಯಿಂದ ವರದಿ ಸಲ್ಲಿಕೆ…Tv10 ಕನ್ನಡ ವರದಿ ಇಂಪ್ಯಾಕ್ಟ್…ನಂಜನಗೂಡು,ಜು23,Tv10 ಕನ್ನಡಫಲಾನುಭವಿ ಮೃತಪಟ್ಟು ಮೂರು ವರ್ಷಗಳ ನಂತರ ಅನುದಾನ ಬಿಡುಗಡೆ ಮಾಡಿದ ಪ್ರಕರಣದ ವರದಿಯನ್ನ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಲಾಗಿದೆ.ಪಿಡಿಓ ನಿರ್ಮಲಾ ರವರು ಮಾಡಿದ ಎಡವಟ್ಟು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರ್ಷದ ವರದಿಯಲ್ಲಿ ಉಲ್ಲೇಖಿಸಲಾಗಿದೆ.ನಂಜನಗೂಡು ತಾಲೂಕು ದೊಡ್ಡಕವಲಂದೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಟ್ಟವಾಡಿ ಗ್ರಾಮದ ಕೆಂಪಮ್ಮ ರವರು 2018 ರಲ್ಲಿ ಬಸವವಸತಿ ಯೋಜನೆಗೆ ಆಯ್ಕೆ ಆಗಿದ್ದಾರೆ.ಮನೆ ನಿರ್ಮಾಣಕ್ಕೆ ಎರಡು ಹಂತದಲ್ಲಿ 59,799/- ರೂ ಬಿಡುಗಡೆ ಮಾಡಲಾಗಿತ್ತು.ಈ ಮಧ್ಯೆ ಕೆಂಪಮ್ಮ 2020 ರಲ್ಲಿ ನಿಧನರಾದರು.2023 ರಲ್ಲಿ ಪಿಡಿಓ ನಿರ್ಮಲಾ ರವರು ನಿಯಮಾನುಸಾರ ಅನುಸರಿಸದೆ ಏಕಾಏಕಿ ಉಳಿದ ಎರಡು ಹಂತದ ಮೊತ್ತವಾದ 59,600/- ರೂ ಬಿಡುಗಡೆ ಮಾಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡದೆ ಜಿಪಿಎಸ್ ಪರಿಶೀಲನೆ ಮಾಡಿರುವಂತೆ ಸರ್ಟಿಫೈ ಮಾಡಿ ಉಳಿದ ಹಣ ಬಿಡುಗಡೆ ಮಾಡಿದ್ದಾರೆ.ಈ ಹಣವನ್ನ ಮೃತ ಕೆಂಪಮ್ಮ ದತ್ತುಪುತ್ರ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ.ಈ ಸಂಭಂಧ ದೊಡ್ಡಕವಲಂದೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಜ್ಯೋತಿ ರವರು ನಿರ್ಮಲಾ ಮಾಡಿದ ಅಕ್ರಮದ ಬಗ್ಗೆ ಆರೋಪ ಮಾಡಿ ಲಿಖಿತ ದೂರು ಸಲ್ಲಿಸಿದ್ದರು.ಈ ಕುರಿತಂತೆ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳ ಕಣ್ಣು ತೆರೆಸಲಾಗಿತ್ತು.ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕೆಂಪಮ್ಮ ಖಾತೆಯಿಂದ ಡ್ರಾ ಆದ ಹಣ ಮತ್ತೆ ಜಮೆ ಆಗಿದೆ.ಈ ಬೆಳವಣಿಗೆ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.ನಿರ್ಮಲಾ ರವರ ನಿರ್ಲಕ್ಷ್ಯತೆ ಬಗ್ಗೆ ಪರಿಶೀಲನೆ ಮಾಡಲು ಸಮಿತಿ ರಚಿಸಲಾಗಿತ್ತು.ಸಮಿತಿಯು ದಾಖಲೆಗಳನ್ನ ಪರಿಶೀಲನೆ ನಡೆಸಿ ವರದಿಯನ್ನ ಸಲ್ಲಿಸಿದೆ.ಇದು Tv10 ಕನ್ನಡ ವರದಿಯ ಇಂಪ್ಯಾಕ್ಟ್ ಆಗಿದೆ…