ಬಿಡಾಡಿ ದನಗಳು ಪಿಂಜರಾಪೋಲ್ ವಶಕ್ಕೆ…ಪಾಲಿಕೆ ನಿರ್ಧಾರ…ಕಾರ್ಯಾಚರಣೆ ಯಾವಾಗ…?
- MysoreNewsTV10 Kannada Exclusive
- July 31, 2024
- No Comment
- 125
ಮೈಸೂರು,ಆ1,Tv10,ಕನ್ನಡಬಿಡಾಡಿ ದನಗಳ ಉಪಟಳದಿಂದ ಸಂಚಾರ ಮುಕ್ತಗೊಳಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.ರಸ್ತೆಗಳ ಮಧ್ಯೆ ನಿಂತ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುವ ದನಗಳನ್ನ ವಶಕ್ಕೆ ಪಡೆದು ದಂಡ ವಿಧಿಸಿ ನಂತರ ಎಚ್ಚೆತ್ತುಕೊಳ್ಳದಿದ್ದಲ್ಲಿ ಪಿಂಜರಾಪೋಲ್ ವಶಕ್ಕೆ ನೀಡಲು ನಿನ್ನೆ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಆದರೆ ಈ ಕಾರ್ಯಾಚರಣೆ ಎಂದಿನದ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಯಾಕಂದ್ರೆ ಈ ಹಿಂದೆಯೂ ಪಾಲಿಕೆ ಅಧಿಕಾರಿಗಳು ಇಂತಹ ಹೇಳಿಕೆಗಳನ್ನ ನೀಡಿ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದದ್ದು ಸಾರ್ವಜನಿಕರಿಗೆ ತಿಳಿದಿದೆ.ಹೇಳಿಕೆಗೆ ತಕ್ಕಂತೆ ಕಾರ್ಯಾಚರಣೆ ಮಾಡದೆ ಸಾರ್ವಜನಿಕರ ಟೀಕೆಗೂ ಪಾಲಿಕೆ ಅಧಿಕಾರಿಗಳು ಗುರಿಯಾಗಿದ್ದಾರೆ.ಈಗಾಗಲೇ ಇಂತಹ ನಿರ್ಣಯ ಕೈಗೊಂಡು ಗಂಟೆಗಳು ಕಳೆದಿದೆ.ಆದ್ರೂ ದನಗಳು ರಾಜಾರೋಷವಾಗಿ ರಸ್ತೆಗಳ ಮಧ್ಯೆ ಕುಳಿತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.ಮೈಸೂರು ನಗರದ ಬಹುತೇಕ ಸ್ಥಳಗಳಲ್ಲಿ ರಸ್ತೆ ಮಧ್ಯೆ ನಿಂತ ಹಸುಗಳ ದೃಶ್ಯಗಳನ್ನ ಸಾರ್ವಜನಿಕರೇ ಸೆರೆ ಹಿಡಿದು ನಮ್ಮ ಕಾರ್ಯಾಲಯಕ್ಕೆ ರವಾನಿಸಿದ್ದಾರೆ.ಈ ಬಗ್ಗೆ ಪೊಲೀಸ್ ಇಲಾಖೆ ಸಹ ದೂರು ನೀಡಿದೆ,ಸಾರ್ವಜನಿಕರಂತೂ ದೂರುಗಳ ಸುರಿಮಳೆ ಸುರಿಸಿದ್ದಾರೆ.ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪಾಲಿಕೆ ಆಯುಕ್ತರು ದನಗಳ ಕಿರುಕುಳ ತಪ್ಪಿಸಲು ಕಠಿಣ ನಿರ್ಧಾರ ಕೈಗೊಂಡಿದ್ದಾರೆ.ಈ ಬಾರಿಯಾದ್ರೂ ಈ ನಿರ್ಧಾರ ಸಕ್ಸಸ್ ಆಗುವುದೇ ಕಾದು ನೋಡಬೇಕಿದೆ…