ಡಾ.ಬಾಬು ಜಗಜೀವನ್ ರಾಮ್ ಭವನಕ್ಕೆ ಕಾಯ್ದಿರಿಸಿದ್ದ ಜಾಗ ಒತ್ತುವರಿ…ತೆರುವುಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ…
- MysoreNewsTV10 Kannada Exclusive
- July 31, 2024
- No Comment
- 459
ಮೈಸೂರು,ಜು31,Tv10 ಕನ್ನಡಒತ್ತುವರಿಯಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಭವನ ಕಟ್ಟಡ ನಿರ್ಮಾಣಕ್ಕಾಗಿಕಾಯ್ದಿರಿಸಿದ್ದ ಜಾಗವನ್ನ ತಾಲೂಕು ಆಡಳಿತ ತೆರುವುಗೊಳಿಸಿದೆ.ಸುಮಾರು ಒಂದು ಕೋಟಿ ಬೆಲೆ ಬಾಳುವ ಜಾಗವನ್ನ ತೆರುವುಗೊಳಿಸಿ ವಶಕ್ಕೆ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.ಮೈಸೂರು ತಾಲೂಕು ಕಸಬ ಹೋಬಳಿ ಬಂಡೀಪಾಳ್ಯ ಗ್ರಾಮದ ಸರ್ವೆ ನಂ.60 ರಲ್ಲಿ 20 ಗುಂಟೆ ಜಮೀನು 2018-19 ರಲ್ಲಿ ಡಾ.ಜಗಜೀವನ್ ರಾಮ್ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.ಸದರಿ ಜಾಗವನ್ನ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು.ಈ ಕುರಿತಂತೆ ತಹಸೀಲ್ದಾರ್ ಕೆ.ಎಂ. ಮಹೇಶ್ ಕುಮಾರ್ ರವರು ದಾಖಲೆಗಳನ್ನ ಪರಿಶೀಲಿಸಿ ಒತ್ತುವರಿಯನ್ನ ಖಚಿತಪಡಿಸಿಕೊಂಡು ತೆರುವುಗೊಳಿಸಲು ಆದೇಶಿಸಿದ್ದರು.ಇಂದು ರಾಜಸ್ವ ನಿರೀಕ್ಷಕರಾದ ಹೇಮಂತ್ ಕುಮಾರ್,ಗ್ರಾಮ ಆಡಳಿತ ಅಧಿಕಾರಿಗಳಾದ ಹರೀಶ್,ಮಹೇಶ್,ಅಜೀಮ್ ಖಾನ್,ಭಾಸ್ಕರ್,ಮಹೇಶ್ ರವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರ ಭದ್ರತೆಯೊಂದಿಗೆ ತೆರುವುಗೊಳಿಸಿ ನಂತರ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ…