
ದೈನಂದಿನ ಕಚೇರಿ ಕೆಲಸಗಳ ನಿರ್ವಹಣೆಗೆ ಅನುಮತಿ ನೀಡಿ…ಮುಡಾ ಆಯುಕ್ತರಿಂದ ಸರ್ಕಾರಕ್ಕೆ ಪತ್ರ…
- MysoreTV10 Kannada Exclusive
- July 31, 2024
- No Comment
- 545
ಮೈಸೂರು,ಜು31,Tv10 ಕನ್ನಡ
ಮುಡಾ ವಿವಾದ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.ಅಧಿವೇಶನದಲ್ಲೂ ಸಹ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.ವಿವಾದವೊಂದು ಸಿಎಂ ಗೂ ಕಂಟಕವಾಗಿ ನಿಂತಿದೆ.ಈ ಎಲ್ಲಾ ಹಿನ್ನಲೆ ಸರ್ಕಾರ ಈ ಹಿಂದೆ ಕೆಲವು ಷರತ್ತುಗಳನ್ನ ಹೇರಿದೆ.ಯಾವುದೇ ಸಭೆಗಳನ್ನ ನಡೆಸಬಾರದು,ಕಡತಗಳ ವಿಲೇವಾರಿ ಮಾಡಬಾರದು,ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನ ಅನುಷ್ಠಾನಗೊಳಿಸಬಾರದು,ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ನಿವೇಶನ ವಿಲೇವಾರಿ ಕುರಿತು ಕ್ರಮ ಜರುಗಿಸಬಾರದೆಂಬ ಷರತ್ತುಗಳನ್ನ ಹಾಕಿದೆ.ಹೀಗಾಗಿ ಮುಡಾ ದಲ್ಲಿ ದೈನಂದಿನ ಕಚೇರಿ ಕೆಲಸಗಳಿಗೆ ಅಡಚಣೆ ಆಗಿದೆ.ಈ ಹಿನ್ನಲೆ ಮುಡಾ ಆಯುಕ್ತರು ನಗರಾಭಿವೃದ್ದಿ ಪ್ರಾಧಿಕಾರಗಳು ಮತ್ತು ನಗರಯೋಜನಾ ಹಾಗೂ ಗ್ರಾಮಾಂತರ ಯೋಜನಾ ಆಯುಕ್ತರಿಗೆ ದೈನಂದಿನ ಕೆಲಸಗಳನ್ನ ನಿರ್ವಹಿಸಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ.ನೌಕರರ ವೇತನ ಭತ್ಯ ನಿರ್ವಹಿಸುವುದು,ನ್ಯಾಯಾಲಯದ ಆದೇಶಗಳನ್ನ ಪಾಲಿಸುವುದು,ಮಾಹಿತಿ ಹಕ್ಕು ಪ್ರಕರಣಗಳಿಗೆ ಸ್ಪಂದಿಸುವುದು,ಭೂಸ್ವಾಧೀನವಾಗದ ಜಮೀನಿಗಳಿಗೆ ನಿರಾಕ್ಷೇಪಣಾ ಪತ್ರ ನೀಡುವುದು,ಅನ್ಯಕ್ರಾಂತ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೂಸ್ವಾಧೀನ ಸಂಭಂಧ ಅಭಿಪ್ರಾಯ ನೀಡುವುದು ಸೇರಿದಂತೆ ಇನ್ನಿತರ ಕೆಲಸಗಳ ನಿರ್ವಹಣೆಗೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ…