ಕಾವೇರಿ,ಕಪಿಲೆ ಆರ್ಭಟ…ಇಡೀ ಗ್ರಾಮವೇ ಜಲಾವೃತ…ಜನಜೀವನ ಅಸ್ತವ್ಯಸ್ತ…ನೆರವಿಗೆ ಧಾವಿಸಿದ ಜಿಲ್ಲಾಡಳಿತ…
- TV10 Kannada Exclusive
- August 1, 2024
- No Comment
- 302
ಮೈಸೂರು,ಆ1,Tv10 ಕನ್ನಡ
ಕಾವೇರಿ,ಕಪಿಲೆ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ನದಿ ಪಾತ್ರದಲ್ಲಿರುವ ತಡಿಮಾಲಂಗಿ ಗ್ರಾಮ
ಸಂಪೂರ್ಣ ಜಲಾವೃತವಾಗಿದೆ.ಜನಜೀವನ ಅಸ್ತವ್ಯಸ್ಥವಾಗಿದೆ. ದೈನಂದಿನ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.ಗ್ರಾಮದ ಇಡೀ ರಸ್ತೆಗಳು ಜಲಾವೃತವಾಗಿದೆ.ಗ್ರಾಮದ
ಬಹುತೇಕ ಮಂದಿ ಕಾಳಜಿ ಕೇಂದ್ರ ಆಶ್ರಯ ಪಡೆದಿದ್ದಾರೆ.ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.ನಿನ್ನೆ
ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ ಸಮಸ್ಯೆಗಳನ್ನ ಆಲಿಸಿದ್ದಾರೆ.ನಿರಶ್ರಿತರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ರಶ್ಮಿ ಮಹೇಶ್ ರವರಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ,ಉಪವಿಭಾಗಾಧಿಕಾರಿ ಎಸ್.ರಕ್ಷಿತ್,ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್,ಇಓ ಕೃಷ್ಣ ಸಾಥ್ ನೀಡಿದ್ದಾರೆ.ನಿರಾಶ್ರಿತರ ಸಂಕಷ್ಟಕ್ಕೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲು ಮುಂದಾಗಿದೆ…