ಅಪರಿಚತನಿಗೆ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ…ಮಾನವೀಯತೆ ತೋರಿದ್ದೇ ತಪ್ಪಾಯ್ತು…!
- CrimeMysore
- August 1, 2024
- No Comment
- 225
ಮೈಸೂರು,ಆ1,Tv10 ಕನ್ನಡ
ಅಪರಿಚಿತನ ಅಸಹಾಯಕತೆಗೆ ಮರುಗಿ ಲಿಫ್ಟ್ ಕೊಡಲು ಹೋದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.ಚಾಮರಾಜನಗರ ಮೂಲದ ಶಿವು ಎಂಬುವರೇ ಹಲ್ಲೆಗೊಳಗಾದವರು.ಅಪರಿಚತನಿಂದ ಹಲ್ಲೆಗೆ ಒಳಗಾದ ಶಿವು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ವೇಳೆ ನಿರ್ಗತಿಕರು,ಭಿಕ್ಷುಕರು,ಅಸಹಾಯಕರಿಗೆ ಬೆಡ್ ಶೀಟ್ ಗಳನ್ನ ನೀಡಿ ಮಾನವೀಯತೆ ಮೆರೆಯುವ ಪುಣ್ಯದ ಕಾರ್ಯ ಮಾಡುವ ಶಿವು ರವರು ಎರಡು ದಿನಗಳ ಹಿಂದೆ ಬೋಗಾದಿ ರಿಂಗ್ ರಸ್ತೆಯ ಸೌಪರ್ಣಿಕ ಅಪಾರ್ಟ್ ಮೆಂಟ್ ಬಳಿ ರಾತ್ರಿ 11 ಗಂಟೆ ವೇಳೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದಾಗ.ಅಪರಿಚಿತ ವ್ಯಕ್ತಿಯೊಬ್ಬ ಅಸಹಾಯಕನಾಗಿ ಕಂಡು ಬಂದಿದ್ದಾನೆ.ನೋಡಲು ಭಿಕ್ಷುಕನಂತೆ ಕಂಡು ಬಂದರೂ ಶಿವು ಆತನ ನೆರವಿಗೆ ಮುಂದಾಗಿದ್ದಾರೆ.ವ್ಯಕ್ತಿಗೆ ತಮ್ಮ ಬೈಕ್ ನಲ್ಲಿ ಲಿಫ್ಟ್ ಕೊಡಲು ಯತ್ನಿಸಿದ್ದಾರೆ.ಶಿವು ರವರ ಮನವಿಯನ್ನ ಅಪರಿಚಿತ ವ್ಯಕ್ತಿ ತಿರಸ್ಕರಿಸಿದ್ದಾನೆ.ಮಾನವೀಯತೆಯಿಂದ ಮತ್ತೆ ಬೈಕ್ ಹತ್ತುವಂತೆ ಕರೆದಿದ್ದಾರೆ.ಈ ವೇಳೆ ಅಪರಿಚಿತ ವ್ಯಕ್ತಿ ತನ್ನ ಬಳಿ ಇದ್ದ ಆಯುಧದಿಂದ ಶಿವು ಮೇಲೆ ಹಲ್ಲೆ ನಡೆಸಿದ್ದಾನೆ.ಶಿವು ರವರ ಕೂಗಾಟ ಕೇಳಿ ಕೆಲವು ಸಾರ್ವಜನಿಕರು ನೆರವಿಗೆ ಬಂದಿದ್ದಾರೆ.ಆಯುಧದಿಂದ ಹಲ್ಲೆ ನಡೆಸಿದ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.ಅಪರಿಚಿತನಿಗೆ ಸಹಾಯ ಮಾಡಲು ಹೋದ ಶಿವು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…