ಪ್ರವಾಹದ ನೀರಿಗೆ ಪಂಪ್ ಹೌಸ್ ಜಲಾವೃತ… ಕುಡಿಯುವ ನೀರಿಗೆ ಸಂಕಷ್ಟ…
- MysoreTV10 Kannada Exclusive
- August 1, 2024
- No Comment
- 158
ನಂಜನಗೂಡು,ಆ1,Tv10 ಕನ್ನಡಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.ಈಗಾಗಲೇ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕಪಿಲಾ ನದಿಗೆ ಬಿಡುಗಡೆ
ನಂಜನಗೂಡಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರಕ್ಕೆ ದಿನನಿತ್ಯ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ದೇಬೂರು ಗ್ರಾಮದ ಬಳಿ ಇರುವ ಕುಡಿಯುವ ನೀರಿನ ಸರಬರಾಜು ಪಂಪ್ ಹೌಸ್ ಸಹ ಜಲಾವೃತವಾಗಿದೆ. ನಂಜನಗೂಡು ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವೆತ್ಯಯವಾಗಿದೆ. ಈಗಾಗಲೇ ನಂಜುಂಡೇಶ್ವರನ ದೇವಾಲಯದ ಸ್ಥಾನಘಟ್ಟ,ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯ,ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ,ತೋಪಿನ ಬೀದಿ, ಒಕ್ಕಲಗೇರಿ,ಹಳ್ಳದ ಕೇರಿ ಸೇರಿದಂತೆ ಸಾಕಷ್ಟು ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಮತ್ತೆ ನಂಜನಗೂಡು ಪಟ್ಟಣದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ…