ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪದಲ್ಲಿ ಪತ್ನಿಗೆ ಟಾರ್ಚರ್…ಹಿಗ್ಗಾಮುಗ್ಗ ಥಳಿಸಿದ ಪತಿ…ಜೀವಭಯದಲ್ಲಿ ಗೃಹಿಣಿ…
- CrimeMysoreTV10 Kannada Exclusive
- August 2, 2024
- No Comment
- 250
ಕೆ.ಆರ್.ನಗರ,ಆ2,Tv10 ಕನ್ನಡ
ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪವೊಡ್ಡಿ ಪತಿರಾಯ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಾಲಿಗ್ರಾಮ ತಾಲೂಕು ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.ಪತಿ ಕ್ರೂರತನಕ್ಕೆ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವರದಕ್ಷಿಣೆ ಹಾಗೂ ಗಂಡುಮಗುವಿನ ವ್ಯಾಮೋಹಕ್ಕೆ ಒಳಗಾದ ಪತಿಯ ಹಿಂಸೆ ಭರಿಸಲು ಸಾಧ್ಯವಾಗದ ಪತ್ನಿ ನ್ಯಾಯಕ್ಕಾಗಿ ಸಾಲಿಗ್ರಾಮ ಪೊಲೀಸರ ಮೊರೆ ಹೋಗಿದ್ದಾರೆ.ಬೃಂದಾ(32) ಪತಿಯಿಂದ ಹಲ್ಲೆಗೆ ಒಳಗಾದ ಗೃಹಿಣಿ.ಹಲ್ಲೆ ನಡೆಸಿದ ಪತಿ ಬಸವರಾಜು,ಅತ್ತೆ ಕಾಳಮ್ಮ ಮತ್ತು ಮಾವ ಚೆಲುವಯ್ಯ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಬೃಂದಾ ದೂರು ದಾಖಲಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಹುಣಸೇಗಾಲದ ಬೃಂದಾ ಹಾಗೂ ದಡದಹಳ್ಳಿಯ ಬಸವರಾಜ್ ಮದುವೆ ಆಗಿದ್ದರು.ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.ಗಂಡು ಮಗು ಹೆತ್ತಿಲ್ಲವೆಂದು ಪತ್ನಿಗೆ ಬಸವರಾಜ್ ಸಾಕಷ್ಟು ಕಿರುಕುಳ ನೀಡಿದ್ದಾನೆ.ವರದಕ್ಷಿಣೆ ವ್ಯಾಮೋಹಕ್ಕೆ ಒಳಗಾದ ಬಸವರಾಜು ಗಂಡು ಮಗು ಹೆತ್ತಿಲ್ಲವೆಂದು ಆಗಾಗ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ.ಈ ಬಗ್ಗೆ ಸಾಕಷ್ಟು ಬಾರಿ ಮನ ಒಲಿಸುವ ಕಾರ್ಯ ನಡೆದಿದೆ.ಆದರೂ ಎಚ್ಚೆತ್ತುಕೊಳ್ಳದ ಬಸವರಾಜು ಪತ್ನಿಯ ಮೇಲೆ ದೌರ್ಜನ್ಯ ತೋರಿಸುತ್ತಲೇ ಬಂದಿದ್ದಾನೆ.ಹೆಣ್ಣುಮಕ್ಕಳನ್ನ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೋ ಆಗ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಧಂಕಿ ಹಾಕುತ್ತಿದ್ದಾನೆ.ಪತಿಯ ವರ್ತನೆಯಿಂದ ಬೇಸತ್ತ ಬೃಂದಾ ಪೊಲೀಸರ ಮೊರೆ ಹೋಗಿದ್ದಾರೆ.ಹಿರಿಯರು ಬಸವರಾಜ್ ಗೆ ಬುದ್ದಿವಾದ ಹೇಳಿದ್ದರೂ ಬದಲಾಗಿಲ್ಲ.ಎರಡು ದಿನಗಳ ಹಿಂದೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ಬಸವರಾಜ್ ಪತ್ನಿಯನ್ನ ಹಿಗ್ಗಾ ಮುಗ್ಗ ಥಳಿಸಿದ್ದಾನೆ.ಗಾಯಗೊಂಡ ಬೃಂದಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪತಿ ಹಾಕುತ್ತಿರುವ ಧಂಕಿಯಿಂದ ಬೃಂದಾ ಜೀವಭಯದಲ್ಲಿದ್ದಾರೆ.ತನ್ನ ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲವೆಂದು ಕಣ್ಣೀರಿಡುತ್ತಿದ್ದಾರೆ.ಗಂಡು ಮಗು ಹಾಗೂ ವರದಕ್ಷಿಣೆ ವ್ಯಾಮೋಹಕ್ಕೆ ಒಳಗಾದ ಪತಿರಾಯನಿಗೆ ಪೊಲೀಸರು ತಕ್ಕ ಶಾಸ್ತಿ ನೀಡಬೇಕಿದೆ.ಬೃಂದಾ ಹಾಗೂ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕಿದೆ…