ಮನೆ ಬಿಟ್ಟುಹೋದ ಅಪ್ಪನಿಗಾಗಿ ಕಾಯುತ್ತಿರುವ ಮಗಳ ಮೃತದೇಹ…ಎಲ್ಲೇ ಇದ್ದರೂ ಬನ್ನಿ…ಕುಟುಂಬಸ್ಥರ ಕಣ್ಣೀರು…ಮೈಸೂರಿನಲ್ಲೊಂದ ಮನಕಲುಕುವ ಘಟನೆ…
- TV10 Kannada Exclusive
- August 5, 2024
- No Comment
- 1231
ಮೈಸೂರು,ಆ5,Tv10 ಕನ್ನಡ
ಮನೆ ಬಿಟ್ಟುಹೋದ ತಂದೆಗಾಗಿ ಮಗಳ ಮೃತದೇಹ ಕಾಯುತ್ತಿರುವ ಮನಕಲುಕುವ ಘಟನೆ ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟ
ಯುವತಿಯ ಮೃತದೇಹವನ್ನ ಇಟ್ಟುಕೊಂಡ ಕುಟುಂಬ ಹೆತ್ತ ತಂದೆಯ ಬರುವಿಕೆಗಾಗಿ ಕಾದು ಕುಳಿತಿದೆ.ತಂದೆ ಬರುವಿಕೆಗಾಗಿ ಅಂತ್ಯಕ್ರಿಯೆಯನ್ನ ಒಂದು ದಿನ ಮುಂದೂಡಿದ್ದು ಇಡೀ ಕುಟುಂಬ ಮನೆ ಬಿಟ್ಟುಹೋದ ವ್ಯಕ್ತಿಗಾಗಿ ಕಾತುರದಿಂದ ಎದುರು ನೋಡುತ್ತಿದೆ.
ನಾಗರಾಜ್.ಆ.ಕೆಂಚಪ್ಪ ಹಾಗೂ ಇಂದಿರಮ್ಮ ದಂಪತಿಯ ಪುತ್ರಿ ಕವನಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಹೂಟಗಳ್ಳಿಯಲ್ಲಿ ಸ್ನೇಹಿತರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕವನ ಸ್ಥಳದಲ್ಲೇ
ಮೃತಪಟ್ಟಿದ್ದಾಳೆ.ಆದಿಚುಂಚನಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿರುವ ಕವನ ಸ್ನೇಹಿತರ ಜೊತೆ ತೆರಳುತ್ತಿದ್ದಾಗ ದಾರುಣವಾಗಿ ಸಾವನ್ನಪ್ಪಿದ್ದಾಳೆ.ಮೂರು ತಿಂಗಳ ಹಿಂದೆ ಕಾರಣಾಂತರದಿಂದ ಹೆತ್ತ ತಂದೆ ನಾಗರಾಜ್ ಮನೆ ಬಿಟ್ಟು ಹೋಗಿದ್ದಾರೆ.ತಂದೆಗಾಗಿ ಕುಟುಂಬಸ್ಥರು ಹುಡುಕಾಡಿದ ಜಾಗವೇ ಇಲ್ಲ.ಕುಟುಂಬಕ್ಕೆ ಊರುಗೋಲಾಗಿದ್ದ ತಂದೆ ಇಲ್ಲದೆ ಅಘಾತಗೊಂಡಿದ್ದ ಕುಟುಂಬಕ್ಕೆ ಇದೀಗ ಮಗಳು ಅಪಘಾತದಲ್ಲಿ ಮೃತಪಟ್ಟಿರುವುದು ಮತ್ತೊಂದು ಶಾಕ್ ಗೆ ಕಾರಣವಾಗಿದೆ.ಸಧ್ಯ ಮನೆ ಬಿಟ್ಟುಹೋದ ತಂದೆ ಈಗಲಾದ್ರೂ ಹಿಂದಿರುಗುತ್ತಾರೆ.ಮಗಳ ಸಾವಿನ ಮಾಹಿತಿ ಅರಿತ ಮೇಲಾದ್ರೂ ಬರಬಹುದೆಂದ ಆಶಾಕಿರಣ ಕುಟುಂಬಸ್ಥರಲ್ಲಿದೆ.ಎಲ್ಲೇ ಇದ್ರೂ ವಾಪಸ್ ಬನ್ನಿ ನಿಮ್ಮ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ.ನಿಮಗಾಗಿ ಮೃತದೇಹವನ್ನ ಇರಿಸಿಕೊಂಡಿದ್ದೇವೆ.ಯಾವುದೇ ಬೇಸರವಿದ್ರೂ ಮರೆತು ಬನ್ನಿ.ನಾಳೆ ಅಂತ್ಯಕ್ರಿಯೆ ಮಾಡುವುದಾಗಿ ಕಳಕಳಿಯಿಂದ ಮನವಿ ಮಾಡಿದ್ದಾರೆ.ಮಗಳ ಅಂತಿಮ ದರುಶನ ಪಡೆಯಲು ಹೆತ್ತ ತಂದೆ ಬರುತ್ತಾರೆಂಬ ವಿಶ್ವಾಸ ಕುಟುಂಬಸ್ಥರಲ್ಲಿದೆ…