ಮಹಿಳೆ ಬಲತ್ಕಾರಕ್ಕೆ ಯತ್ನ…ಗಂಡನ ಮುಂದೆಯೇ ಕೃತ್ಯ…ದೃಶ್ಯಗಳನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪತಿರಾಯ…

ಮಹಿಳೆ ಬಲತ್ಕಾರಕ್ಕೆ ಯತ್ನ…ಗಂಡನ ಮುಂದೆಯೇ ಕೃತ್ಯ…ದೃಶ್ಯಗಳನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪತಿರಾಯ…

ಮೈಸೂರು,ಸೆ4,Tv10 ಕನ್ನಡ

ಪತ್ನಿಯ ಮೇಲೆ ಮತ್ತೊಬ್ಬ ವ್ಯಕ್ತಿ ಬಲತ್ಕಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿರಾಯನೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪ್ರಕರಣವೊಂದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಭಂಧ ಪತ್ನಿ ತನ್ನ ಪತಿ ಅಬ್ದುಲ್ ಫಾರೂಖ್,ನಜೀರ್ ಮಹಮದ್ ಹನೀಫಾ ಸೇರಿದಂತೆ 9 ಮಂದಿ ವಿರುದ್ದ FIR ದಾಖಲಿಸಿದ್ದಾರೆ.

ಮೈಸೂರಿನ ಕಲ್ಯಾಣಗಿರಿಯಲ್ಲಿ ವಾಸವಿರುವ ಮುನ್ನಿ(ಹೆಸರು ಬದಲಿಸಲಾಗಿದೆ) ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆ.19 ವರ್ಷಗಳ ಹಿಂದೆ ಮುನ್ನಿ ಹಾಗೂ ಅಬ್ದುಲ್ ಫಾರೂಖ್ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅಬ್ದುಲ್ ಫಾರೂಖ್ ಮತ್ತೊಬ್ಬ ಮಹಿಳೆ ಜೊತೆ ಸಂಭಂಧ ಬೆಳೆಸಿ ಪತ್ನಿಯನ್ನ ನಿರ್ಲಕ್ಷಿಸಿದ್ದಾನೆ.ಜೀವನೋಪಾಯಕ್ಕಾಗಿ ಮುನ್ನಿ ಹೈದರಾಬಾದ್ ಗೆ ತೆರಳಿ ನಂತರ ಮೈಸೂರಿಗೆ ಹಿಂದಿರುಗಿ ಕಲ್ಯಾಣಗಿರಿಯಲ್ಲಿ ಮನೆ ಬಾಡಿಗೆ ಪಡೆದುಕೊಂಡಿದ್ದಾರೆ.ಜೀವನಾಂಶಕ್ಕಾಗಿ ಮುನ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಬ್ದುಲ್ ಫಾರೂಖ್ ಪಾಲಿಸಿಲ್ಲ.ಜೀವನೋಪಾಯಕ್ಕಾಗಿ ಮುನ್ನಿ ಸಾಕಷ್ಟು ಸಾಲ ಮಾಡಿದ್ದಾರೆ.ಎರಡು ತಿಂಗಳ ಹಿಂದೆ ಸಾಲದ ಹಣ ಪಡೆಯಲು ಹರ್ಷದ್ ಖಾನ್ ಎಂಬಾತ ಮನೆಗೆ ಬಂದಿದ್ದಾನೆ.ಈ ವೇಳೆ ಮನೆಗೆ ನುಗ್ಗಿದ ಅಬ್ದುಲ್ ಫಾರೂಖ್,ನಾಸಿರ್,ಮಹಮದ್ ಹನೀಫ್ ಹಾಗೂ ಇತರರು ಮುನ್ನಿ ಹಾಗೂ ಹರ್ಷದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.ನಂತರ ಮುನ್ನಿ ರವರ ಬಟ್ಟೆಗಳನ್ನ ಹರಿದುಹಾಕಿ ವಿಡಿಯೋ ಚಿತ್ರೀಕರಿಸಿದ್ದಾರೆ.ಅಬ್ದುಲ್ ಫಾರೂಖ್ ಜೊತೆ ಬಂದಿದ್ದ ನಾಜಿರ್ ಎಂಬಾತ ಮುನ್ನಿ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಈ ದೃಶ್ಯಗಳನ್ನ ಪತಿ ಅಬ್ದುಲ್ ಫಾರೂಖ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ.ಕೆಲ ಸಮಯದಲ್ಲಿ ವಿಡಿಯೋ ಡಿಲೀಟ್ ಮಾಡಿ ನಂತರ ಎಡಿಡ್ ಮಾಡಿ ಮತ್ತೆ ಅಪ್ ಲೋಡ್ ಮಾಡಿ ಪತ್ನಿಯನ್ನ ತೇಜೋವಧೆ ಮಾಡಿದ್ದಾನೆ.ಈ ಎಲ್ಲ ಬೆಳವಣಿಗೆಯಿಂದ ನೊಂದ ಮುನ್ನಿ ಉದಯಗಿರಿ ಠಾಣೆಗೆ ದೂರು ನೀಡಿದ್ದಾರೆ.ಎರಡು ತಿಂಗಳ ನಂತರ ಉದಯಗಿರಿ ಠಾಣೆ ಪೊಲೀಸರು ಅಬ್ದುಲ್ ಫಾರೂಕ್, ನ ಜೀರ್,ಮಹಮದ್ ಹನೀಫ್ ಹಾಊ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *