ವರದಕ್ಷಿಣೆ ಕಿರುಕುಳ…ಗೃಹಿಣಿ ನೇಣಿಗೆ…ಗಂಡ,ಅತ್ತೆ ವಿರುದ್ದ FIR ದಾಖಲು…

ವರದಕ್ಷಿಣೆ ಕಿರುಕುಳ…ಗೃಹಿಣಿ ನೇಣಿಗೆ…ಗಂಡ,ಅತ್ತೆ ವಿರುದ್ದ FIR ದಾಖಲು…

ಮೈಸೂರು,ಸೆ4,Tv10 ಕನ್ನಡಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬೆಳಬಾಡಿ ಗ್ರಾಮದಲ್ಲಿ ನಡೆದಿದೆ.ವರದಕ್ಷಿಣೆ ತರುವಂತೆ ಪೀಡಿಸಿದ ಗಂಡ ಮಹೇಶ್ ಹಾಗೂ ಅತ್ತೆ ರತ್ನಮ್ಮ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳವಾಡಿ ಗ್ರಾಮದ ಶಿಲ್ಪಾ (22) ವರದಕ್ಷಿಣೆ ಕಿರುಕುಳಕ್ಕೆ ಸಾವನ್ನಪ್ಪಿದ ದುರ್ದೈವಿ.2021 ರಲ್ಲಿ ಶಿಲ್ಪಾ ಹಾಗೂ ಮಹೇಶ್ ವಿವಾಹ ನೆರವೇರಿತ್ತು.ಪರಿಚಿತರೊಬ್ಬ ಮೂಲಕ ಸಂಭಂಧ ಬಂದಿದ್ದು ಮದುವೆ ಸಮಯದಲ್ಲಿ ವರದಕ್ಷಿಣೆ ನಿರಾಕರಿಸಿದ್ದರು.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವರದಕ್ಷಿಣೆ ಪಡೆಯುವುದಾಗಿ ತಿಳಿಸಿದ್ದು ಸಧ್ಯ ಮದುವೆ ಮಾಡಿಕೊಡುವಂತೆ ಒಪ್ಪಿಸಿದ್ದರು.ರಾಮನಗರದ ಬಿಡದಿ ನಿವಾಸಿ ಮಹೇಶ್ ರವರ ನಿವಾಸದ ಬಳಿ ಮದುವೆ ನೆರವೇರಿತ್ತು.ಪ್ರಾರಂಭದಲ್ಲಿ ಅನ್ಯೋನ್ಯತೆಯಿಂದ ನೋಡಿಕೊಂಡ ಪತಿ ಮನೆಯವರು ನಂತರ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು.ಶಿಲ್ಪಾ ತಾಯಿ ಲಕ್ಷ್ಮಮ್ಮ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು.ಹೀಗಿದ್ದೂ ಹಣ ಹೊಂದಿಸಿ ಚಿನ್ನ ಕೊಡಿಸಿದ್ದರು.ಈ ಮಧ್ಯೆ ಶಿಲ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು.ಈ ಸಮಯದಲ್ಲೂ ವರದಕ್ಷಿಣೆ ನೀಡುವಂತೆ ಮಹೇಶ್ ಹಾಗೂ ಈತನ ತಾಯಿ ರತ್ನಮ್ಮ ಒತ್ತಾಯಿಸಿದ್ದರು.ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಶಿಲ್ಪ ಕೆಲವು ದಿನಗಳ ಹಿಂದೆ ತವರು ಮನೆ ಸೇರಿದ್ದರು.ಲಕ್ಷ್ಮಮ್ಮ ರವರ ಹೆಸರಿನಲ್ಲಿದ್ದ ಹಳೆ ಮನೆಯನ್ನ ಮಹೇಶ್ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹಾಕಿದ್ದರು.ಹೀಗಾಗಿ ವರದಕ್ಷಿಣೆ ಕೊಟ್ಟಲ್ಲಿ ಮಾತ್ರ ಅತ್ತೆ ಮನೆಯಲ್ಲಿ ನೆಮ್ಮದಿ ಎಂದು ತಾಯಿ ಜೊತೆ ಆಗಾಗ ಶಿಲ್ಪ ಹೇಳುತ್ತಿದ್ದಳು.ಗಂಡನ ಜೊತೆ ಬಾಳುವಂತೆ ತಾಯಿ ಸಹ ಬುದ್ದಿವಾದ ಹೇಳಿದ್ದರು.ಸೆಪ್ಟೆಂಬರ್ 1 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಶಿಲ್ಪ ನೇಣಿಗೆ ಶರಣಾಗಿದ್ದಾಳೆ.ಶಿಲ್ಪ ಸಾವಿಗೆ ವರದಕ್ಷಿಣೆ ಕಿರುಕುಳ ಎಂದು ಆರೋಪಿಸಿರುವ ತಾಯಿ ಲಕ್ಷ್ಮಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಳಿಯ ಮಹೇಶ್ ಹಾಗೂ ತಾಯಿ ರತ್ನಮ್ಮ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *